ಮುಂಬೈ, ಜೂ12(Daijiworld News/SS): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಮತ್ತೆ ಏರಿಕೆಯಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆಯಷ್ಟು ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆಯಷ್ಟು ಹೆಚ್ಚಳ ಕಂಡಿದೆ. ಆ ಮೂಲಕ ಪ್ರತೀ ಡಾಲರ್ ಗೆ 69.38 ರೂಗೆ ಮೌಲ್ಯ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಕುಸಿತ ಮತ್ತು ವಿಶ್ವಷೇರು ಮಾರುಕಟ್ಟೆಯಲ್ಲಿನ ಕುಸಿತ ಭಾರತೀಯ ರೂಪಾಯಿ ಚೇತರಿಕೆಗೆ ಕಾರಣ ಎಂದು ಹೇಳಲಾಗಿದೆ.
ವಿಶ್ವ ವಾಣಿಜ್ಯ ಮಾರುಕಟ್ಟೆಯಲ್ಲಿನ ದೇಶ ದೇಶಗಳ ತೆರಿಗೆ ಸಮರ ಮತ್ತು ಸ್ಪರ್ಧಾತ್ಮಕ ವ್ಯಾಪರ ಕೂಡ ರೂಪಾಯಿ ಮೌಲ್ಯ ಚೇತರಿಕೆಗೆ ಕಾರಣ ಎನ್ನಲಾಗಿದೆ.
ಜೂ.11ರಂದು ಕೂಡ ರೂಪಾಯಿ ಮೌಲ್ಯದಲ್ಲಿ 8 ಪೈಸೆಯಷ್ಟು ಚೇತರಿಕೆ ಕಂಡುಬಂದಿತ್ತು. ವಾರದ ಮೊದಲ ವಹಿವಾಟು ದಿನ ಅಂದರೆ ಸೋಮವಾರದಂದು ರೂಪಾಯಿ ಮೌಲ್ಯ 6 ಪೈಸೆಯಷ್ಟು ಹೆಚ್ಚಳವಾಗಿತ್ತು ಎನ್ನಲಾಗಿದೆ.