ಕಾಸರಗೋಡು, ಜೂ 12 (Daijiworld News/MSP): ವಾಹನಗಳಿಗೆ ಜಿ.ಪಿ.ಎಸ್ ಕಡ್ಡಾಯಗೊಳಿಸುವ ಕೇರಳ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರತಿಭಟಿಸಿ ಕೇರಳದಲ್ಲಿ ಜೂನ್ 18ರಂದು ವಾಹನ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರದಲ್ಲಿ ಬಸ್ಸು, ಆಟೋ , ಲಾರಿ , ಟ್ಯಾಕ್ಸಿ ಮುಂತಾದ ವಾಹನಗಳು ಪಾಲ್ಗೊಳ್ಳಲಿವೆ.
ಜೂ.೧೨ ರ ಗುರುವಾರ ತ್ರಿಶ್ಯೂರಿನಲ್ಲಿ ನಡೆದ ಮೋಟಾರು ವಾಹನ ಸಂರಕ್ಷಣಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ. ವಾಹನಗಳಿಗೆ ಜಿ.ಪಿ.ಎಸ್ ಕಡ್ಡಾಯಗೊಳಿಸಿದ್ರೆ, ಅಮಿತ ವೇಗದಲ್ಲಿ ಓಡುವ ವಾಹನಗಳನ್ನು ಪತ್ತೆಹಚ್ಚಲು, ಅಪಘಾತ ಸೃಷ್ಟಿಸುವ ರೀತಿಯಲ್ಲಿ ವಾಹನ ಚಾಲನೆ, ಅಪಘಾತಕ್ಕೆ ಕಾರಣವಾಗುವ ರೀತಿಯಲ್ಲಿ ಹೆದ್ದಾರಿಗಳಲ್ಲಿ ಅನಿಯಂತ್ರಿತ ನಿಲುಗಡೆಯನ್ನು ಈ ವ್ಯವಸ್ಥೆಯ ಮೂಲಕ ಪತ್ತೆ ಹಚ್ಚಲು ಸಾಧ್ಯವಾಗುವುದು. ಮಹಿಳೆಯರ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಆಕ್ರಮಣ, ಅಸಭ್ಯ ವರ್ತನೆ ಮುಂತಾದುವುಗಳನ್ನು ಜಿಪಿಎಸ್ ಮೂಲಕ ಮಾಸ್ಟರ್ ನಿಯಂತ್ರಣ ಕೊಠಡಿಯಲ್ಲಿ ತಿಳಿಯಲು ಸಾಧ್ಯವಾಗುವುದು.