ನವದೆಹಲಿ, ಜೂ 12 (Daijiworld News/SM): ಕರಾವಳಿ ಭಾಗದಿಂದ ಲೋಕಸಭೆಗೆ ಆಯ್ಕೆಯಾಗಿರುವ ಸಂಸದೆ ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ ಸಿಗಬಹುದೆಂದು ಬಹುತೇಕ ಭಾವಿಸಿದ್ದರು. ಆದರೆ ಅವರಿಗೆ ಆ ಹುದ್ದೆ ಕೈ ತಪ್ಪಿದೆ. ಆದರೂ ಕೂಡ ಅವರು ಅನೀರಿಕ್ಷಿತ ಹುದ್ದೆಯೊಂದಕ್ಕೆ ಆಯ್ಕೆಯಾಗಿದ್ದಾರೆ.
ಶೋಭಾ ಕರಂದ್ಲಾಜೆ ಅವರನ್ನು ಲೋಕಸಭೆಯ ಬಿಜೆಪಿ ಸಂಸದರಿಗೆ ಮುಖ್ಯ ಸಚೇತಕಿ ಆಗಿ ನೇಮಿಸಲಾಗಿದೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದ ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿಗಿರಿ ಸಿಗದ ಕಾರಣ ನಿರಾಸೆಯುಂಟಾಗಿತ್ತು. ಆದರೆ, ಇದೀಗ ಅನಿರೀಕ್ಷಿತವಾಗಿ ಹುದ್ದೆಯೊಂದು ಅವರ ಪಾಲಾಗಿದೆ. ಅಚ್ಚರಿಯ ರೀತಿಯಲ್ಲಿ ಮುಖ್ಯ ಸಚೇತಕಿ ಆಗಿ ನೇಮಿಸಲಾಗಿದೆ.
ಬಿಜೆಪಿಯ 303 ಸಂಸದರಿಗೆ ವಿಪ್ ಜಾರಿ ಮಾಡುವ ಮಹತ್ವದ ಕಾರ್ಯ ಮುಖ್ಯ ಸಚೇತಕರಿಗಿದೆ. ಲೋಕಸಭೆಯ ನಾಯಕತ್ವದ ಚುನಾವಣೆಗಳು, ರಾಜ್ಯಸಭಾ ಸದಸ್ಯರ ಆಯ್ಕೆ ಮುಂತಾದ ವಿಷಯಗಳಲ್ಲೂ ಕೂಡ ಶೋಭಾ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದಲ್ಲಿ ಪ್ರಮುಖ ಹುದ್ದೆಯೊಂದನ್ನು ನೀಡಲಾಗಿದೆ. ಆದರೆ, ಇದು ಸಂಪುಟ ದರ್ಜೆಯ ಸ್ಥಾನವಲ್ಲ.