ನವದೆಹಲಿ, ಜೂ13(Daijiworld News/SS): ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗುರುವಾರವೂ (ಜೂ.13) ಮತ್ತಷ್ಟು ಇಳಿಕೆಯಾಗಿದೆ. ಕೊಂಚ ದಿನ ಏರಿಕೆ ಕಂಡು ಆತಂಕ ಮೂಡಿಸಿದ್ದ ಪೆಟ್ರೋಲ್-ಡೀಸೆಲ್ ಬೆಲೆ ಕಳೆದೆರಡು ವಾರಗಳಿಂದ ಭರ್ಜರಿ ಇಳಿಕೆ ಕಾಣುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡಿದೆ. ರಾಜಧಾನಿ ಬೆಂಗಳೂರಿನಲ್ಲೂ ಇಂಧನ ಬೆಲೆ ಇಳಿಕೆಯಾಗಿದ್ದು, ಪೆಟ್ರೋಲ್ ಲೀಟರ್ಗೆ 09 ಪೈಸೆ ಕಡಿಮೆಯಾಗಿ 72.72 ರೂ.ರಷ್ಟಿದೆ. ಇನ್ನು ಡೀಸೆಲ್ ಬೆಲೆಯಲ್ಲೂ ಇಳಿಕೆಯಾಗಿದ್ದು, ಲೀಟರ್ ಡೀಸೆಲ್ಗೆ 66.50 ರೂ.ಗಳಷ್ಟಿದ್ದು, 06 ಪೈಸೆ ಕಡಿಮೆಯಾಗಿದೆ.
ನವದೆಹಲಿಯಲ್ಲಿ ಲೀ. ಪೆಟ್ರೋಲ್ಗೆ 08 ಪೈಸೆ ಕಡಿಮೆಯಾಗುವ ಮೂಲಕ 70.35 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಲೀ.ಗೆ 06 ಪೈಸೆ ಇಳಿಕೆ ಕಂಡು 64.33 ರೂ.ಗಳಷ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಕೂಡ ಬೆಲೆ ಇಳಿಕೆಯಾಗಿದ್ದು, ಪೆಟ್ರೋಲ್ ಲೀ.ಗೆ 08 ಪೈಸೆ ಕಡಿಮೆಯಾಗಿ 76.04 ರೂ.ಗೆ ಮಾರಾಟವಾಗುತ್ತಿದೆ. ಇತ್ತ ಡೀಸೆಲ್ ಬೆಲೆಯಲ್ಲಿ 06 ಪೈಸೆ ಕಡಿಮೆಯಾಗಿ 67.45 ರೂ.ಗಳಷ್ಟಿದೆ.
ಕಳೆದೆರಡು ದಿನಗಳ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಬಾಸ್ಕೆಟ್ನ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ಗೆ 60.14 ಡಾಲರ್ ಇತ್ತು.