ನವದೆಹಲಿ, ಜೂ13(Daijiworld News/SS): ಪತನಗೊಂಡಿರುವ ಎಎನ್-32 ಯುದ್ಧ ವಿಮಾನದಲ್ಲಿದ್ದವರು ಬದುಕುಳಿದಿಲ್ಲ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಎಎನ್-32 ವಿಮಾನ ಜೂನ್ 03 ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದಂತೆ ವಿಮಾನ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. 8 ದಿನಗಳ ಬಳಿಕ ಕಣ್ಮರೆಯಾದ ಎಎನ್ 32ರ ಅವಶೇಷ ಲಿಪೋದ ಉತ್ತರ ಭಾಗದಲ್ಲಿ 16 ಕಿ.ಮೀ. ದೂರದ ಟ್ಯಾಟೊದ ಈಶಾನ್ಯ ಭಾಗದಲ್ಲಿ ಅಂದಾಜು 12,000 ಅಡಿ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದ್ದವು.
ಜೂ. 15ರಂದು ವಾಯಪಡೆಯ 9, ಸೇನೆಯ ನಾಲ್ವರು ಮತ್ತು ಇಬ್ಬರು ನಾಗರಿಕ ಪರ್ವತಾರೋಹಿಗಳು ಸೇರಿ 15 ಜನರಿದ್ದ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ವಿಮಾನದಲ್ಲಿದ್ದ ಬದುಕುಳಿದಿರುವ ಬಗ್ಗೆ ಪತ್ತೆ ಹಚ್ಚಲು ತೆರಳಿತ್ತು. ಆದರೆ, ಘಟನಾ ಸ್ಥಳ ತಲುಪಲು ಬೆಟ್ಟಗುಡ್ಡಗಳಿಂದ ಕೂಡಿದ ಭೂಪ್ರದೇಶ ಮತ್ತು ಕೆಟ್ಟ ಹವಾಮಾನ ವೈಪರೀತ್ಯದಿಂದಾಗಿ ವಿಳಂಬವಾಗಿತ್ತು. ಆದರೆ, ಯೊರೊಬ್ಬರು ಬದುಕಿಲ್ಲ ಎಂದು ವಾಯುಸೇನೆ ಟ್ವೀಟ್ ಮಾಡಿದೆ.
ವಿಮಾನದಲ್ಲಿದ್ದ ಜಿಎಂ ಚಾರ್ಲ್ಸ್, ಎಚ್ ವಿನೋದ್, ಆರ್ ತಾಪ, ಎ ತನ್ವಾರ್, ಎಸ್. ಮೋಹಂತ್ಯ, ಎಂ.ಕೆ. ಗಾರ್ಗ್, ಕೆ.ಕೆ. ಮಿಶ್ರಾ, ಅನೂಪ್ ಕುಮಾರ್, ಎಸ್.ಕೆ.ಸಿಂಗ್, ಪಂಕಜ್, ಪುತಲಿ ಮತ್ತು ರಾಜೇಶ್ ಕುಮಾರ್ ಬದುಕುಳಿದಿಲ್ಲ ಎಂದು ಭಾರತೀಯ ವಾಯುಪಡೆ ತಿಳಿಸಿದೆ.