ಚಿಕ್ಕಬಳ್ಳಾಪುರ, ಫೆ.23 (DaijiworldNews/AA): ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಮೃತಪಟ್ಟು, ತಾಯಿ ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿಯಲ್ಲಿ ಭಾನುವಾರಸಂಭವಿಸಿದೆ.

ಪೃಥ್ವಿರಾಜ್(3) ಮೃತಪಟ್ಟ ಮಗು. ಗರ್ಭಿಣಿ ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿವೆ. ಗರ್ಭಿಣಿ ಮೋನಿಕಾ 15 ದಿನಗಳ ಹಿಂದಷ್ಟೇ ಹೆರಿಗೆಗಾಗಿ ತವರು ಮನೆ ಹಾಲಗಾನಹಳ್ಳಿಗೆ ಬಂದಿದ್ದು, ಈ ವೇಳೆ ಈ ಅವಘಡ ನಡೆದಿದೆ.
ಮನೆಯ ಮುಂದೆ ಇದ್ದ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮಗು ಸಾವನ್ನಪ್ಪಿದೆ. ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.