ಬೆಂಗಳೂರು, ಫೆ.28 (DaijiworldNews/AK): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರ ಊರಿಗೆ ಹೋಗದಂತೆ ನಟ ದರ್ಶನ್ಗೆ ವಿಧಿಸಿದ್ದ ಷರತ್ತು ಸಡಿಲಗೊಂಡಿದೆ. ಈ ಮೂಲಕ ದರ್ಶನ್ ದೇಶಾದ್ಯಂತ ಸಂಚಾರಕ್ಕೆ ಅವಕಾಶ ನೀಡಿ ಹೈಕೋರ್ಟ್ಆದೇಶ ಹೊರಡಿಸಿದೆ.

ಹೈಕೋರ್ಟ್ನ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶ ನೀಡಿದ್ದು, ದೇಶಾದ್ಯಂತ ಹೋಗಲು ಅವಕಾಶ ನೀಡಿದೆ. ವಿದೇಶಕ್ಕೆ ಹೋಗುವಂತಿಲ್ಲ ಅಂತಾ ಆದೇಶ ಹೊರಡಿಸಿದೆ.
ದರ್ಶನ್ ಹೈಕೋರ್ಟ್ಗೆ ಕಾರಣವನ್ನು ಕೊಟ್ಟಿದ್ದಾರೆ. ವೃತ್ತಿಯಲ್ಲಿ ನಾನೊಬ್ಬ ನಟ ಹಾಗೂ ಮೈಸೂರಿನ ಖಾಯಂ ನಿವಾಸಿ. ವೃತ್ತಿಪರ ಕಾರಣಗಳು ಹಾಗೂ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಹೊರಗೆ ಹೋಗುವುದು ಯಾವಾಗಲೂ ಅವಶ್ಯವಿರುತ್ತದೆ. ಆದರೆ, ಈ ಕೋರ್ಟ್ ವಿಚಾರಣಾ ನ್ಯಾಯಲಯದ ವ್ಯಾಪ್ತಿ ಬಿಡದಂತೆ ಷರತ್ತು ವಿಧಿಸಿದೆ. ಇದರಿಂದಾಗಿ ವಿಚಾರಣಾ ನ್ಯಾಯಾಲಯದಲ್ಲಿ ಪ್ರತಿ ಬಾರಿ ಅನುಮತಿ ಪಡೆಯುವುದು ಕಠಿಣವಾಗಿದೆ. ನನಗೆ ಕೇವಲ ರಾಜ್ಯದ ಹೊರಗೆ ಹೋಗುವುದಲ್ಲದೇ ವಿದೇಶಕ್ಕೆ ಹೋಗುವುದು ಅವಶ್ಯವಿದೆ ಎಂದು ನಟ ದರ್ಶನ್ ಕೆಲವು ಅಂಶಗಳನ್ನ ನ್ಯಾಯಾಲಯದ ಮುಂದಿಟ್ಟಿದ್ದಾರೆ.