ತಿರುವನಂತಪುರಂ, ಮಾ.03(DaijiworldNews/TA): ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕಲಂಜೂರು ಗ್ರಾಮದಲ್ಲಿ ಜೋಡಿ ಹತ್ಯೆ ನಡೆದಿದೆ. 32 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಸ್ನೇಹಿತನ ನಡುವೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ಅವರನ್ನು ಕಡಿದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಬೈಜು ತನ್ನ ಪತ್ನಿ ವೈಷ್ಣವಿ ಮತ್ತು ನೆರೆಮನೆಯ ವಿಷ್ಣು (32) ವಿನಿಮಯ ಮಾಡಿಕೊಂಡ ಸಂದೇಶಗಳನ್ನು ನೋಡಿದ್ದಾನೆ ಮತ್ತು ಇದು ಹತ್ಯೆಗೆ ಕಾರಣವಾಗಿದೆ ಎಂದು ವರದಿಯಾಗಿದೆ.ವರದಿಗಳ ಪ್ರಕಾರ, ರಾತ್ರಿ ಬೈಜು ಮತ್ತು ವೈಷ್ಣವಿ ನಡುವೆ ಜಗಳ ನಡೆದಿದ್ದು, ಅವನು ಆಕೆಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆಕೆ ಸುರಕ್ಷತೆಗಾಗಿ ವಿಷ್ಣುವಿನ ಮನೆಗೆ ಓಡಿಹೋದಾಗ ಅವನು ಆಕೆಯನ್ನು ಬೆನ್ನಟ್ಟಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ವೈಷ್ಣವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ನಂತರ ಬೈಜು ವಿಷ್ಣುವಿನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದಾನೆ. ಸ್ಥಳೀಯ ಕೂಡಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಜುನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.