ನವದೆಹಲಿ, ಮಾ.05(DaijiworldNews/AK): ಐಐಟಿ ಪದವೀಧರರಾದ ಅರ್ಚಿತ್ ಚಂದಕ್ ಅವರಿಗೆ ದೊಡ್ಡ ಕಂಪನಿಗಳಿಂದ ಲಕ್ಷಗಳ ರೂ ಸಂಬಳದ ಉದ್ಯೋಗದ ಆಫರ್ ಬಂದಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.

ಐಪಿಎಸ್ ಅರ್ಚಿತ್ ಚಂದಕ್ ನಾಗಪುರದ ಶಂಕರ್ ನಗರದ ನಿವಾಸಿ. ಅವರು ತಮ್ಮ ಶಾಲಾ ಶಿಕ್ಷಣವನ್ನು ಭವನದ ಬಿಪಿ ವಿದ್ಯಾ ಮಂದಿರದಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ, 2012ರ ಜೆಇಇ ಪರೀಕ್ಷೆಯಲ್ಲಿ ಚಂದಕ್ ತನ್ನ ಜಿಲ್ಲೆಗೆ ಟಾಪರ್ ಆಗಿದ್ದರು. ಚಂದಕ್ ಐಐಟಿ ದೆಹಲಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಗೆ ಸೇರಿಕೊಂಡರು. ಬಿಟೆಕ್ ನಂತರ, ಜಪಾನಿನ ಕಂಪನಿಯೊಂದು ವರ್ಷಕ್ಕೆ 35 ಲಕ್ಷ ಸಂಬಳ ನೀಡುವ ಉದ್ಯೋಗದ ಆಫರ್ ನೀಡಿತು. ಆದರೆ ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು.
UPSC ಗೆ ತಯಾರಿ ನಡೆಸಲು ಆದ್ಯತೆ ನೀಡಿದರು. ಇಂಜಿನಿಯರ್ ಆಗುವ ಬದಲು ಆಡಳಿತ ಸೇವೆಯಲ್ಲಿ ತೊಡಗಿ ದೇಶಸೇವೆ ಮಾಡುವುದಕ್ಕೆ ಅರ್ಚಿತ್ ಚಂದಕ್ ಮುಂದಾದರು. ಅವರಿಗೆ ಬಿ.ಟೆಕ್ ಸಮಯದಲ್ಲಿ ಸ್ಪಷ್ಟವಾಯಿತು. ಉದ್ಯೋಗದ ಆಫರ್ ಬಿಟ್ಟು ಈಗ UPSC ಪರೀಕ್ಷೆಗೆ ತಯಾರಿ ನಡೆಸಲು ಮನಸ್ಸು ಮಾಡಿದ್ದರು.
ಅರ್ಚಿತ್ ಚಂದಕ್ 2016 ರಲ್ಲಿ ದೆಹಲಿಯ ಐಐಟಿಯಿಂದ ಬಿಟೆಕ್ ಪದವಿಯನ್ನು ಪಡೆದರು. ಇದರ ನಂತರ, ಅವರು 2018 ರಲ್ಲಿ ಮೊದಲ ಬಾರಿಗೆ UPSC ಸಿವಿಲ್ ಸರ್ವೀಸಸ್ ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲಿಯೇ ಅಖಿಲ ಭಾರತ 184ನೇ ರ್ಯಾಂಕ್ ಪಡೆಯುವ ಮೂಲಕ ಐಪಿಎಸ್ ಆದರು. ಪ್ರಸ್ತುತ ನಾಗ್ಪುರದಲ್ಲಿ ಡಿಸಿಪಿಯಾಗಿ ನೇಮಕಗೊಂಡರು.
ಐಪಿಎಸ್ ಅರ್ಚಿತ್ ಚಂದಕ್ ಅವರು ತಮ್ಮ ಯುಪಿಎಸ್ ಸಿ ಬ್ಯಾಚ್ ಮೇಟ್ ಐಎಎಸ್ ಸೌಮ್ಯ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಜಿಲ್ಲಾ ಪರಿಷತ್ ನಾಗ್ಪುರದಲ್ಲಿ ಸಿಇಒ ಆಗಿ ನೇಮಕಗೊಂಡರು. ಸೌಮ್ಯಾ ಶರ್ಮಾ ಅಖಿಲ ಭಾರತ ಒಂಬತ್ತನೇ ರ್ಯಾಂಕ್ ಗಳಿಸಿದ್ದರು. ಸೌಮ್ಯಾ ಶ್ರವಣದೋಷವುಳ್ಳವರು. 16 ನೇ ವಯಸ್ಸಿನಲ್ಲಿ ಅವರು ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡರು.