ನವದೆಹಲಿ,ಜೂ 14 (Daijiworld News/MSP):ಇತ್ತೀಚೆಗೆ ಅರುಣಾಲ ಪ್ರದೇಶದ ಬೆಟ್ಟದ ತಪ್ಪಲಿನಲ್ಲಿ ಪತನಗೊಂಡಿದ್ದ ಭಾರತೀಯ ವಾಯುಪಡೆಯ AN 32 ವಿಮಾನದಲ್ಲಿದ್ದ ಎಲ್ಲ 13 ಮಂದಿಯ ಶವಗಳನ್ನು ಶುಕ್ರವಾರ ಅಸ್ಸಾಂನ ಜೋರ್ಹಾತ್ ವಾಯುನೆಲೆಗೆ ತರಲಾಗುವುದು.
ವಿಂಗ್ ಕಮಾಂಡರ್ ಜಿ.ಎಂ. ಚಾರ್ಲ್ಸ್, ಸ್ಕ್ವಾಡರ್ನ್ ಲೀಡರ್ ಎಚ್. ವಿನೋದ್, ಫ್ಲೈಟ್ ಲೆಫ್ಟೆನೆಂಟ್ ಎಂ.ಕೆ. ಗಾರ್ಗ್, ಫ್ಲೈಟ್ ಲೆಫ್ಟೆನೆಂಟ್ ಎಸ್.ಮೊಹಾಂತಿ, ಫ್ಲೈಟ್ ಲೆಫ್ಟೆನೆಂಟ್ ಎ. ತನ್ವಾರ್, ಫ್ಲೈಟ್ ಲೆಫ್ಟೆನೆಂಟ್ ಆರ್. ಥಾಪಾ, ವಾರಂಟ್ ಅಧಿಕಾರಿ ಕೆ.ಕೆ.ಮಿಶ್ರಾ, ಅನೂಪ್ ಕುಮಾರ್, ಶರಿನ್, ಹಿರಿಯ ಪೈಲಲಟ್ಗಳಾದ ಎಸ್.ಕೆ. ಸಿಂಗ್, ಪಂಕಜ್ ಎನ್.ಸಿ, ಪುತಲಿ ಮತ್ತು ರಾಜೇಶ್ ಕುಮಾರ್ ಅಫಘಾತದಲ್ಲಿ ಮೃತಪಟ್ಟ ಅಧಿಕಾರಿಗಳಾಗಿದ್ದಾರೆ.
ಬ್ಲಾಕ್ ಬಾಕ್ಸ್ ಹಾಗೂ ಕಾಕ್ ಪಿಟ್ನ ಧ್ವನಿ ರೆಕಾರ್ಡರ್ಅನ್ನು ನೆಲಕ್ಕಪ್ಪಳಿಸಿದ ಜಾಗದಿಂದ ಪಡೆದುಕೊಳ್ಳಲಾಗಿದೆ. ಬ್ಲಾಕ್ ಬಾಕ್ಸ್ನಿಂದ ಅಫಘಾತವಾಗುವ ಮುನ್ನ AN 32 ಒಳಗೆ ಏನೆಲ್ಲಾ ಬೆಳವಣಿಗೆ ನಡೆದಿದ್ದವು ಎಂಬುದನ್ನು ಪತ್ತೆ ಮಾಡಲು ತನಿಖೆ ಸಮಯ ನೆರವಾಗಲಿದೆ. ಅಫಘಾತಕ್ಕೆ ಕಾರಣಗಳನ್ನು ಪತ್ತೆ ಮಾಡಲು ಆಂತರಿಕ ತನಿಖೆಗೆ ಆದೇಶಿಸಲಾಗಿದೆ.
ಆರು ಮಂದಿ ಅಧಿಕಾರಿಗಳು, ಐವರು ವಿಮಾನದ ಸಿಬ್ಬಂದಿ ಹಾಗೂ ಇನ್ನಿತರ ಇಬ್ಬರು ಮಂದಿಯನ್ನೊಳಗೊಂಡ ವಿಮಾನ ಜೂನ್ 3 ರಂದು ಅಸ್ಸಾಂನ ಜರ್ಹತ್ ವಾಯುನೆಲೆಯಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿತ್ತು.