ಚೆನ್ನೈ,ಜೂ14(Daijiworldnews/AZM): 'ಹಿಂದಿ ಅಥವಾ ಇಂಗ್ಲೀಷ್ ಮಾತ್ರ ಮಾತನಾಡಿ' ಎಂದು ದಕ್ಷಿಣ ರೈಲ್ವೆ, ಅಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯನ್ನು ಇಂದು ಹಿಂಪಡೆದಿದೆ.
ತಮಿಳುನಾಡಿನಲ್ಲಿ ಪ್ರತಿಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆಯ ಬಳಿಕ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಜೂನ್ 12ರಂದು ವಿಭಾಗೀಯ ನಿಯಂತ್ರಣ ಕಚೇರಿ ಮತ್ತು ಸ್ಟೇಷನ್ ಮಾಸ್ಟರ್ ಗಳಿಗೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ಮಾತನಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು, ಇದು ಸೊಕ್ಕಿನ ವರ್ತನೆಯಾಗಿದ್ದು, ರೈಲ್ವೆ ತನ್ನ ಅಧಿಕಾರಿಗಳನ್ನು ಹೆದರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಜೂನ್ 12ರಂದು ಮುಖ್ಯ ಸಾರಿಗೆ ಯೋಜನಾ ವ್ಯವಸ್ಥಾಪಕ ಆರ್ ಶಿವ ಅವರು, ವಿಭಾಗೀಯ ನಿಯಂತ್ರಣ ಕಚೇರಿ ಮತ್ತು ಸ್ಟೇಷನ್ ಮಾಸ್ಟರ್ ಗಳ ನಡುವಿನ ಸಂಭಾಷಣೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿರಬೇಕು. ಪ್ರಾದೇಶಿಕ ಭಾಷೆ ಬಳಸುವುದನ್ನು ತಪ್ಪಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದರು.