ಬಾಂಬೆ,ಜೂ14(Daijiworldnews/AZM):ಮಾಲೆಂಗಾವ್ ಸ್ಫೊಟ ಪ್ರಕರಣದ ನಾಲ್ವರು ಆರೋಪಿಗಳಿಗೆ ಇಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಆರೋಪಿಗಳಾದ ಧನ್ ಸಿಂಗ್, ಲೋಕೇಶ್ ಶರ್ಮಾ, ಮನೋಹರ್ ನರ್ವಾರಿಯಾ ಮತ್ತು ರಾಜೇಂದ್ರ ಚೌಧರಿ ಅವರಿಗೆ ನ್ಯಾಯಮೂರ್ತಿಗಳಾದ ಐ.ಎ.ಮಹಂತಿ ಮತ್ತು ಎ.ಎಂ.ಬದಾರ್ ಅವರಿದ್ದ ವಿಭಾಗೀಯ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದೆ.
"ಆರೋಪಿಗಳ ಮನವಿಯನ್ನು ಪುರಸ್ಕರಿಸಲಾಗಿದೆ. ಆರೋಪಿಗಳನ್ನು 50,000 ರೂ.ಗಳ ನಗದು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಲಾಗಿದ್ದು, ಪ್ರತಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಕ್ಕೆ ಹಾಜರಾಗಬೇಕು. ಸಾಕ್ಷಿಗಳನ್ನು ನಾಶಪಡಿಸಲು ಅಥವಾ ತಿರುಚಲು ಪ್ರಯತ್ನಿಸಬಾರದು" ಎಂದು ನ್ಯಾಯಾಲಯ ಹೇಳಿದೆ.
ನಾಸಿಕ್ ಸಮೀಪದ ಮಾಲೆಗಾಂವ್ ನಲ್ಲಿರುವ ಹಮೀದಿಯಾ ಮಸೀದಿ ಬಳಿಯ ಸ್ಮಶಾನದ ಹೊರಗೆ 2008ರ ಸೆಪ್ಟೆಂಬರ್ 8ರಂದು ಸರಣಿ ಬಾಂಬ್ ಸ್ಫೋಟ ನಡೆದಿದ್ದು, 37 ಜನ ಮೃತಪಟ್ಟಿದ್ದರು.ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.