ಬೆಂಗಳೂರು,ಮಾ.08(DaijiworldNews/AK): ಚಿನ್ನ ಕಳ್ಳ ಸಾಗಣೆ ಪ್ರಕರಣ ಎದುರಿಸುತ್ತಿರುವ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ಗೆ ಸಿಬಿಐ ಪ್ರವೇಶಿಸಿದೆ.

ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿಕೊಂಡಿದೆ. ದೇಶಾದ್ಯಂತ ಗೋಲ್ಡ್ ಸ್ಮಗ್ಲಿಂಗ್ ಹೆಚ್ಚಾದ ಹಿನ್ನೆಲೆ ಪ್ರತ್ಯೇಕವಾಗಿ ತನಿಖೆ ಪ್ರಾರಂಭ ಮಾಡಿದೆ.
ಗೋಲ್ಡ್ ಸ್ಮಗ್ಲಿಂಗ್ನ ಸಿಂಡಿಕೇಟ್ನ ಪತ್ತೆ ಹಚ್ಚಲು ಸಿಬಿಐ ಮುಂದಾಗಿದೆ. ದೆಹಲಿ, ಮುಂಬೈ, ಬೆಂಗಳೂರಿನಲ್ಲಿ ಸಿಬಿಐ ತನಿಖೆ ಪ್ರಾರಂಭಿಸಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬೆಂಗಳೂರು ಏರ್ಪೋರ್ಟ್ನಲ್ಲಿ ನಟಿ ರನ್ಯಾ ರಾವ್ ಬಂಧನಕ್ಕೆ ಒಳಗಾಗಿದ್ದರು. ಡಿಆರ್ಐ ಅಧಿಕಾರಿಗಳು ಆರೋಪಿ ವಿಚಾರಣೆ ನಡೆಸುತ್ತಿದ್ದಾರೆ.
ದುಬೈನಿಂದ 14 ಕೆಜಿಗೂ ಹೆಚ್ಚು ತೂಕದ ಚಿನ್ನವನ್ನು ತೊಡೆಯ ಭಾಗದಲ್ಲಿ ಅಂಟಿಸಿಕೊಂಡು ನಟಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.