ಕಲಬುರಗಿ, ಮಾ.08 (DaijiworldNews/AA): ಸಿದ್ದರಾಮಯ್ಯ ಒಳ್ಳೆ ಬಜೆಟ್ ಕೊಟ್ಟಿದ್ದಾರೆ. ಡಿಕೆಶಿ ಕೂಡ ಪಕ್ಷ, ಸಂಘಟನೆ ಅಂತಾ ಒಳ್ಳೆ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ರು ಒಟ್ಟಾಗಿ ಹೋಗ್ಬೇಕು. ಅಭಿವೃದ್ಧಿ ವಿಚಾರ ಬಿಟ್ಟು ಬೇರೆ ಮಾತಾಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸೀಟ್ ಫೈಟ್ ತೀವ್ರಗೊಂಡಿರುವ ಹೊತ್ತಲ್ಲೇ ಸಿಎಂ-ಡಿಸಿಎಂಗೆ ಸಂದೇಶ ನೀಡಿರುವ ಅವರು, ಸಿದ್ದರಾಮಯ್ಯ ಹಾಗೂ ಡಿಕೆಶಿ ನೀವಿಬ್ಬರು ಪರಸ್ಪರ ವಿರುದ್ಧ ಹೋದ್ರೆ ಕಷ್ಟ ಆಗುತ್ತೆ ಎಂದು ಕಿವಿಮಾತು ಹೇಳಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವಿರುದ್ಧವಾಗಿ ಹೋದ್ರೆ ನಮಗೆ ತೊಂದರೆ ಎಂದಿದ್ದಾರೆ.