ನವದೆಹಲಿ,ಜೂ14(Daijiworldnews/AZM): ಕೋಲ್ಕತಾದ ತರಬೇತಿ ವೈದ್ಯರೊಬ್ಬರ ಮೇಲಿನ ಹಲ್ಲೆ ಘಟನೆ ಖಂಡಿಸಿ ಜೂ.೧೭ರಂದು ದೇಶದೆಲ್ಲೆಡೆ ಮುಷ್ಕರ ನಡೆಸಲು ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ನಿರ್ಧರಿಸಿದೆ.
ಜೂನ್ 17ರಂದು ದೇಶದ ಬಹುತೇಕ ವೈದ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಅಂದು ಬೆಳಗ್ಗೆ 6ಗಂಟೆಯಿಂದ ತುರ್ತು ಸೇವೆಯಂತಹ ಅಗತ್ಯ ಸೇವೆಗಳನ್ನ ಹೊರತುಪಡಿಸಿ ಬಹುತೇಕ ವೈದ್ಯಕೀಯ ಸೇವೆಗಳು 24 ಗಂಟೆ ಸ್ಥಗಿತಗೊಳ್ಳಲಿವೆ. ಅಂದು ಓಪಿಡಿ ಕಾರ್ಯನಿರ್ವಹಿಸುವುದಿಲ್ಲ. ತುರ್ತು ಅಲ್ಲ, ಅಗತ್ಯ ಅಲ್ಲದ ಯಾವುದೇ ವೈದ್ಯಕೀಯ ಸೇವೆಗಳು ಅಂದು ಇರುವುದಿಲ್ಲ. ಅಂದು ನಡೆಯುವ ಬೃಹತ್ ಪ್ರತಿಭಟನೆ ಮತ್ತು ಮುಷ್ಕರದಲ್ಲಿ 3.5 ಲಕ್ಷ ವೈದ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.