ಅಹ್ಮದಾಬಾದ್, ಜೂ15(Daijiworld News/SS): ವಾಯು ಚಂಡಮಾರುತ ಪಥ ಬದಲಾಯಿಸಿದೆ ಎನ್ನುವಷ್ಟರಲ್ಲಿ ಮತ್ತೆ ಮರುಕಳಿಸುವ ಭೀತಿ ಎದುರಾಗಿದೆ. ‘ವಾಯು’ ಚಂಡಮಾರುತವು ಮೂರು ದಿನಗಳ ಬಳಿಕ ಮತ್ತೆ ಕಛ್ ಪ್ರದೇಶವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.
ವಾಯು ಚಂಡಮಾರುತವು ಗುರುವಾರ (ಜೂನ್ 13) ಗುಜರಾತ್ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಕೆಲವು ದಿನಗಳ ಹಿಂದೆಯೇ ಹೇಳಿದ್ದರು. ಅದರಂತೆ ಕರಾವಳಿಯ 10 ಜಿಲ್ಲೆಗಳ ಸುಮಾರು 2.75 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಮಾತ್ರವಲ್ಲದೆ ಸೇನಾ ಪಡೆ, ಎನ್ಡಿಆರ್ಎಫ್ ತುಕಡಿಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿತ್ತು. ಆದರೆ ಬುಧವಾರ ಕೆಲವೆಡೆ ಭಾರಿ ಮಳೆಯಾಗಿದ್ದು ಬಿಟ್ಟರೆ, ಚಂಡಮಾರುತವು ಅಂಥ ಹಾನಿ ಉಂಟುಮಾಡಿರಲಿಲ್ಲ. ಚಂಡ ಮಾರುತ ಪಥ ಬದಲಾಯಿಸಿತ್ತು.
ಆದರೆ ಇದೀಗ ರಾಜ್ಯದಿಂದ ಚಂಡಮಾರುತದ ಪಥ ಬದಲಾವಣೆಯಾಗಿದ್ದು, ಯಾವುದೆ ಭೀತಿ ಇಲ್ಲ ಎಂದು ಗುಜರಾತ್ ಸಿಎಂ ವಿಜಯ್ ರುಪಾನಿ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಚಂಡಮಾರುತ ಮರುಕಳಿಸುವ ಭೀತಿ ಎದುರಾಗಿದೆ. ಜೂ.17-18 ರಂದು ಚಂಡಮಾರುತ ಗುಜರಾತ್ ನ ಕಛ್'ಗೆ ಅಪ್ಪಳಿಸಲಿದೆ ಎಂದು ವರದಿ ಪ್ರಕಟವಾಗಿದೆ.
ಜೂ.16 ರಂದು ಮತ್ತೊಮ್ಮೆ ಗುಜರಾತ್ ನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿರುವ ಚಂಡಮಾರುತ ಜೂ.17-18 ರಂದು ಮರುಕಳಿಸಲಿದ್ದು, ಮತ್ತೆ ಅಲರ್ಟ್ ಘೋಷಣೆ ಮಾಡಲಾಗಿದೆ.