ಬೆಂಗಳೂರು, ಮಾ.13 (DaijiworldNews/AA): ರನ್ಯಾರಾವ್ ಕೇಸ್ನ ತನಿಖೆ ಮುಗಿಯುವ ತನಕ ಕಾಯಬೇಕು. ಯಾವ ಸಚಿವರು ಇದ್ದಾರೆ ಎಂದು ಬಿಜೆಪಿ ಅವರು ಹೆಸರು ಹೇಳಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ನಡೆಯುತ್ತಿದೆ, ಕಾಯಬೇಕು. ಏರ್ಪೋರ್ಟ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತೆ. ಅದು ಕೇಂದ್ರ ಸರ್ಕಾರದ ಜವಾಬ್ದಾರಿ. ಸಚಿವರ ಬಗ್ಗೆ ಮಾತನಾಡಿದರೆ ಏಕೆ ಡ್ಯಾಮೇಜ್ ಆಗುತ್ತೆ? ಅವರ ಹೆಸರು ಹೇಳಲಿ ಎಂದು ಸವಾಲೆಸಗಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಡಿನ್ನರ್ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರು ಡಿನ್ನರ್ಗೆ ಕರೆದಿದ್ದಾರೆ, ಹೋಗುತ್ತೇನೆ. ಹೋಗಲು ಬೇಕಾಗುತ್ತದೆ. ಅವರು ಪಾರ್ಟಿ ಹೆಸರಲ್ಲಿ ಡಿನ್ನರ್ ಕೊಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.