ಗುಜರಾತ್, ಜೂ 15 (Daijiworld News/MSP): ಗುಜರಾತಿನ ವಡೋದರದ ಹೊಟೇಲ್ ನ ಒಳಚರಂಡಿ ಸ್ವಚ್ಚಗೊಳಿಸಲೆಂದು ಮ್ಯಾನ್ ಹೋಲ್ಗೆ ಇಳಿದಿದ್ದ ನಾಲ್ವರು ಶೌಚ ಕಾರ್ಮಿಕರ ಸಹಿತ ಒಟ್ಟು ಏಳು ಮಂದಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಜೂ 15 ರ ಶನಿವಾರ ನಡೆದಿದೆ.
ವಡೋದರ ನಗರದಿಂದ ಸುಮಾರು 30 ಕಿ.ಮೀ. ದೂರದ ದಾಭೋಯಿ ತೆಹಸಿಲ್ನ ಫರ್ತಿಕುಯಿ ಗ್ರಾಮದಲ್ಲಿನ ಹೊಟೇಲ್ ಮ್ಯಾನ್ಹೋಲ್ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಏಳು ಮಂದಿಯಲ್ಲಿ ಮೂವರು ಹೊಟೇಲ್ ಕಾರ್ಮಿಕರಾಗಿದ್ದಾರೆ.
" ಮ್ಯಾನ್ ಹೋಲ್ಗೆ ಇಳಿದ ಓರ್ವ ಶೌಚ ಕಾರ್ಮಿಕನಿಗೆ ಹೊರ ಬರಲು ಅಸಾಧ್ಯವಾದಾಗ ಉಳಿದವರು ಮ್ಯಾನ್ ಹೋಲ್ ಒಳಗೆ ಹೋದರು. ಪರಿಣಾಮವಾಗಿ ಎಲ್ಲರೂ ಉಸಿರುಗಟ್ಟಿ ಸತ್ತರು ಎಂದು ಜಿಲ್ಲಾಧಿಕಾರಿ ಕಿರಣ್ ಝವೇರಿ" ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.