ನವದೆಹಲಿ, ,ಮಾ.18 (DaijiworldNews/AK):ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಸರ್ಕಾರ ಮುಸ್ಲಿಮರ ಆಸ್ತಿ ಕಬಳಿಕೆ ಮಾಡುವ ಹುನ್ನಾರ ನಡೆಸಿದೆ ಎಂದು ಎಐಎಮ್ಐಎಮ್ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

ಮಸೂದೆ ವಿರೋಧಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಮರಿಂದ ಸ್ಮಶಾನಗಳು, ಮಸೀದಿಗಳು ಮತ್ತು ದರ್ಗಾಗಳನ್ನು ಕಸಿದುಕೊಳ್ಳುವ ನಿಬಂಧನೆಗಳನ್ನು ಹೊಂದಿದೆ.
ಈ ಮಸೂದೆ ವಕ್ಫ್ ಆಸ್ತಿಯನ್ನು ಉಳಿಸುವುದಕ್ಕಾಗಿ ಅಲ್ಲ, ಅತಿಕ್ರಮಣಕಾರರನ್ನು ತೆಗೆದುಹಾಕುವುದಕ್ಕಾಗಿ ಅಲ್ಲ, ಈ ಮಸೂದೆ ವಕ್ಫ್ ಆಸ್ತಿಯನ್ನು ಕೊನೆಗೊಳಿಸುವುದಕ್ಕಾಗಿ. ಮುಸ್ಲಿಮರಿಂದ ಸ್ಮಶಾನಗಳು, ಖಾಂಕಾ, ದರ್ಗಾಗಳನ್ನು ಕಸಿದುಕೊಳ್ಳುವುದಕ್ಕಾಗಿ. ಅವರ ಉದ್ದೇಶಗಳು ಕೆಟ್ಟವು ಮತ್ತು ಅವರು ದೇಶದಲ್ಲಿ ದೂರವನ್ನು ಹೆಚ್ಚಿಸಲು ಬಯಸುತ್ತಾರೆ ಎಂದು ಹೇಳಿದರು.