ಬೆಂಗಳೂರು, ಮಾ.18 (DaijiworldNews/AK):ಗೃಹಲಕ್ಷ್ಮಿ ಯೋಜನೆಯ ಕೇವಲ ಜನವರಿಯಿಂದ ಉಳಿದಿದ್ದು, ಅದನ್ನೂ ಪಾವತಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಪರಿಷತ್ ಕಲಾಪದಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ಗೃಹಲಕ್ಷ್ಮಿ ಹಣ ಆರು ತಿಂಗಳಿಂದ ಬಾಕಿ ಇದೆ ಎಂದು ವಿರೋಧಪಕ್ಷದ ನಾಯಕರು ತಿಳಿಸಿದ್ದಾರೆ. ಇದು ಅಪ್ಪಟ ಸುಳ್ಳು. ಆದರೆ ಗೃಹಲಕ್ಷ್ಮಿ ಯೋಜನೆಯ ಕೇವಲ ಜನವರಿಯಿಂದ ಉಳಿದಿದ್ದು, ಅದನ್ನೂ ಪಾವತಿಸಲಾಗುವುದು.
ಶಿಕ್ಷಣ ಇಲಾಖೆಯಡಿ 11400 ಶಿಕ್ಷಕರ ಕೊರತೆ ಇದೆ. 6400 ಶಾಲೆಗಳಲ್ಲಿ ಏಕ ಶಿಕ್ಷಕರು ಇದ್ದಾರೆ. ಬಿಜೆಪಿಯು 4 ವರ್ಷದಲ್ಲಿ ಎಷ್ಟು ಜನ ಶಿಕ್ಷಕರ ನೇಮಕಾತಿ ಮಾಡಿದ್ದಾರೆಂದು ತಿಳಿಸಲಿ ಎಂದು ಸವಾಲು ಹಾಕಿದರು.
ಪ್ರಸಕ್ತ ವರ್ಷದಲ್ಲಿ ಶೇ.50 ರೈತರ ಆತ್ಮಹತ್ಯೆಗಳು ಕಡಿಮೆಯಾಗಿದೆ. ಫೆಬ್ರವರಿ ಅಂತ್ಯಕ್ಕೆ 640 ಮಂದಿ ರೈತರ ಆತ್ಮಹತ್ಯೆಯಾಗಿದ್ದು, ಇದು ಬಿಜೆಪಿ ಆಡಳಿತದ ಅವಧಿಗಿಂತ ಕಡಿಮೆಯಾಗಿದೆ ಎಂದು ಸಿಎಂ ಹೇಳಿದರು.
ಎಲ್ಲಾ ದುರ್ಬಲವರ್ಗದವರನ್ನೂ ನಾನು ಪ್ರೀತಿಸುತ್ತೇನೆ. ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ವಿವಿ.ಗಳನ್ನು ಮುಚ್ಚುವುದಿಲ್ಲ.ಆದರೆ ಸಚಿವಸಂಪುಟ ಉಪಸಮಿತಿಯ ವರದಿ ಬಂದ ನಂತರ ವಿವಿಗಳನ್ನು ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.ರೈತರ ಆತ್ಮಹತ್ಯೆಗಳು ಹೆಚ್ಚಿರುವ ಬಗ್ಗೆ ಕೇಳಲಾಗಿದೆ. ಆದರೆ ವಾಸ್ತವಿಕವಾಗಿ 40% ವರೆಗೆ ಆತ್ಮಹತ್ಯೆಗಳು ಕಡಿಮೆಯಾಗಿದೆ.ಫೆಬ್ರವರಿ ಅಂತ್ಯದವರಗೆ 644 ಆಗಿವೆ. ಆತ್ಮಹತ್ಯೆಗಳು ಇಳಿಮುಖವಾಗಿದೆ.ಬೆಲೆ ಏರಿಕೆಯನ್ನು ಪ್ರಶ್ನಿಸಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕಚ್ಚಾ ತೈಲದ ಬೆಲೆ 108-125 ಡಾಲರ್ ಇತ್ತು,, ಆಗ ಡೀಸೆಲ್ ಬೆಲೆ 46.59 ಇತ್ತು, ಮೋದಿಯವರ ಕಾಲದಲ್ಲಿ ಕಚ್ಚಾ ತೈಲದ ಬೆಲೆ 73-76 ಡಾಲರ್ ಇದೆ, ಆದರೆ ಡೀಸೆಲ್ ಬೆಲೆ 90 ರೂ. ಆಗಿದೆ. ಅರ್ದದಷ್ಟು ಬೆಲೆ ಹೆಚ್ಚಾಗಿದೆ. ನಾವು ಎಲ್ಲಾ ಬಾಬ್ತುಗಳಿಂದ 7 ರಿಂದ 8 ಸಾವಿರ ರೂ. ಹೆಚ್ಚಿಸಿದ್ದೇವೆ .
ಆದರೆ ಗ್ಯಾರಂಟಿಗಳಿಗೆ 51 ಸಾವಿರ ಕೋಟಿ ರೂ. ನೀಡಿದ್ದೇವೆ , ನೀರಾವರಿಗೆ ಈ ಬಾರಿ ಸಣ್ಣ ನೀರಾವರಿಗೆ 1000 ಕೋಟಿ ರೂ. ಹೆಚ್ಚಿಸಲಾಗಿದೆ ಎಂದರು.
ಯಡಿಯೂರಪ್ಪನವರು ಮಹದಾಯಿ ಯೋಜನೆ ಅನುಷ್ಠಾನ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ ಅವರಿಂದ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ.