ಬೆಂಗಳೂರು, ಮಾ.18 (DaijiworldNews/AK): ಮಾಜಿ ಸಚಿವ , ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅಧ್ಯಕ್ಷ ಹೆಚ್.ಎಂ.ರೇವಣ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಹಲ್ಲೆ , ಜಾತಿನಿಂದನೆ ಆರೋಪ ಮಾಡಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ತಮ್ಮ ಬಗ್ಗೆ ಮಾತಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾರ್ಯಕರ್ತೆ ನಂದಿನಿ ನಾಗರಾಜು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ನಂದಿನಿ ನಾಗರಾಜ್ (ಮಾರ್ಚ್ 17) ಕೆಕೆ ಗೆಸ್ಟ್ ಹೌಸ್ ನಲ್ಲಿ ಇರುವಾಗ ಈ ಘಟನೆ ಆಗಿದೆ. ಇನ್ನು ಈ ಸಂಬಂಧ ನಂದಿನಿ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಮಹಿಳಾ ಆಯೋಗಕ್ಕೂ ಮೊರೆ ಹೋಗಿದ್ದಾರೆ.
ಈ ಹಿಂದೆ ಟೆಂಡರ್ ವಿಚಾರಕ್ಕೆ ಹೆಚ್.ಎಂ.ರೇವಣ್ಣ ಮತ್ತು ಮಹಿಳೆ ಮಧ್ಯೆ ಸ್ವಲ್ಪ ವಾಗ್ವಾದ ನಡೆದಿತು ಎನ್ನಲಾಗಿದೆ. ಇದೇ ವಿಚಾರವಾಗಿ ಕೆಕೆ ಗೆಸ್ಟ್ ಕ್ಯಾಂಟಿನ್ ನಲ್ಲಿ ಕೂತಿದ್ದ ಮಹಿಳೆ ಬಗ್ಗೆ ರೇವಣ್ಣ ನಿಂದನೆ ಮಾತಾಡಿದ್ದಾರಂತೆ.. ಈ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ತನ್ನ ಬೆರಳು ಮುರಿದು ಹಲ್ಲೆ ನಡೆಸಿದ್ದಲ್ಲದೇ ನನ್ನ ಕುರಿತು ಜಾತಿ ನಿಂದನೆ ಮಾಡಿದ್ದಾರೆ ಎಂದು ಕೆಲವು ಮೊಬೈಲ್ ವಿಡಿಯೋ ಜೊತೆ ಹೈಗ್ರೌಂಡ್ಸ್ ಠಾಣೆಗೆ ನಂದಿನಿ ನಾಗರಾಜ್ ದೂರು ನೀಡಿದ್ದಾರೆ.