ಕೋಲ್ಕತ್ತಾ,ಜೂ15(Daijiworldnews/AZM): ವೈದ್ಯರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದ್ದು, ವೈದ್ಯರು ತಮ್ಮ ಕೆಲಸಕ್ಕೆ ಹಿಂದಿರುಗಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಲು ಮಮತಾ ಬ್ಯಾನರ್ಜಿ ವೈದ್ಯರ ಸಭೆ ಕರೆದಿದ್ದು, ವೈದ್ಯರು ಗೈರಾಗಿದ್ದರು. ಈ ಕುರಿತು ಬೇಸರ ವ್ಯಕ್ತಪಡಿಸಿದ ಮಮತಾ, 'ನಾನು ನನ್ನ ಮಂತ್ರಿಗಳನ್ನು, ಪ್ರಧಾನ ಕಾರ್ಯದರ್ಶಿಯನ್ನು ವೈದ್ಯರನ್ನು ಭೇಟಿ ಮಾಡಲು ಕಳುಹಿಸಿದ್ದೇನೆ, ನಾನು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇನೆ ಮತ್ತು ಕಿರಿಯ ವೈದ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದೆ. ಸಾಂವಿಧಾನಿಕ ಸಂಸ್ಥೆಗೆ ಗೌರವ ತೋರಿಸಬೇಕು" ಎಂದರು.
ಕಿರಿಯ ವೈದ್ಯರ ಐದು ದಿನಗಳ ಮುಷ್ಕರದ ನಂತರವೂ ನಾವು ಎಸ್ಮಾ ಕಾಯ್ದೆಯನ್ನು ಕೈಗೊಂಡಿಲ್ಲ ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ '' ಎಂದು ಮಮತಾ ಹೇಳಿದರು.