ಕೊಯಮತ್ತೂರು, ಜೂ16(Daijiworld News/SS): ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾದಳ (ಎನ್ಐಎ) ನಡೆಸಿದ ಶೋಧಕಾರ್ಯದ ವೇಳೆ ವಶಕ್ಕೆ ಪಡೆದಿದ್ದ ಮೂವರು ಐಸಿಸ್ ಬೆಂಬಲಿಗರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮೊಹಮ್ಮದ್ ಹುಸೇನ್, ಶಹ ಜಹಾನ್, ಶೇಖ್ ಶಫೀಉಲ್ಲಾ ಬಂಧಿತ ಐಸಿಸ್ ಬೆಂಬಲಿಗರು.
ಇವರ ಬಂಧನಕ್ಕಾಗಿ ರಾಷ್ಟ್ರೀಯ ತನಿಖಾದಳ ಮನೆ ಸಹಿತ ಒಟ್ಟು 7 ಕಡೆಗಳಲ್ಲಿ ಶೋಧ ನಡೆಸಿದ್ದಾರೆ. ಬಂಧಿತರಿಂದ ಐಸಿಸ್ ಪರ ಪ್ರಚಾರ ನಡೆಸುತ್ತಿರುವ ಕುರಿತು ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.
ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದಂದು ಸ್ಫೋಟ ನಡೆಸಿದ ಝಹ್ರನ್ ಹಶೀಂ ಜತೆಗೆ ಫೇಸ್ಬುಕ್ನಲ್ಲಿ ಸ್ನೇಹಿತನಾಗಿದ್ದ ಮೊಹಮ್ಮದ್ ಅಜರುದ್ದೀನ್ನನ್ನು ಎನ್ಐಎ ಬಂಧಿಸಿತ್ತು. ಐಸಿಸ್ನ ತಮಿಳುನಾಡು ವಿಭಾಗವನ್ನು ಹುಟ್ಟುಹಾಕಿದ್ದ ಈತನ ಜತೆಗೆ ಮೊಹಮ್ಮದ್ ಹುಸೇನ್, ಶಹ ಜಹಾನ್, ಶೇಖ್ ಶಫೀಉಲ್ಲಾ ಸಂಪರ್ಕ ಹೊಂದಿದ್ದರು.
ಸೋಶಿಯಲ್ ಮೀಡಿಯಾಗಳ ಮೂಲಕ ಐಸಿಸ್ ಪರ ಪ್ರಚಾರ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.