ಕಾಸರಗೋಡು, ಜೂ16(Daijiworld News/SS): ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದನಾಳದ ಮೂಲಕ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಟ ನಡೆಸುತ್ತಿದ್ದ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದೋಹಾ ಮತ್ತು ಶಾರ್ಜಾದಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೋಝೀಕೋಡ್ ಮೂಲದ ಮುಹಮ್ಮದ್ ಬಶೀರ್, ಮುಫ್ತಿಯಾಸ್ ಮತ್ತು ಸೈಫುದ್ದೀನ್ ಎಂಬವರಿಂದ ಒಟ್ಟು 1.84 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಮೂವರನ್ನು ವಿಚಾರಣೆಗೊಳಪಡಿಸಿ, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಟ್ಟು 62 ಲಕ್ಷ ಬೆಲೆಬಾಳುವ ಚಿನ್ನವನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.