ನವದೆಹಲಿ, ಜೂ16(Daijiworld News/SS): ಭಾರತ ಮತ್ತು ಮ್ಯಾನ್ಮಾರ್ ಜಂಟಿಯಾಗಿ ಸೇರಿಕೊಂಡು ಈಶಾನ್ಯ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆ ಸಂಘಟನೆಗಳ ಶಿಬಿರಗಳ ಮೇಲೆ ದಾಳಿ ನಡೆಸಿವೆ.
ಸನ್ಶೈನ್-2 ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್ನ ಗಡಿಯೊಳಗೆ ಅಡಗಿಕೊಂಡಿದ್ದ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ವಿಶೇಷ ಪಡೆಗಳು, ಅಸ್ಸಾಂ ರೈಫಲ್ಸ್ ಮತ್ತು ಇನ್ಫೆಂಟ್ರ ಘಾತಕ್ಸ್ ಸೇರಿ ಭಾರತೀಯ ಸೇನಾಪಡೆಯ ಎರಡು ಬೆಟಾಲಿಯನ್ ಯೋಧರು ಮತ್ತು ಮ್ಯಾನ್ಮಾರ್ ಸೇನಾಪಡೆಯ ನಾಲ್ಕು ಬ್ರಿಗೇಡ್ಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದವು ಎಂದು ತಿಳಿದುಬಂದಿದೆ.
ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರರನ್ನು ಭಾರತೀಯ ಸೇನಾಪಡೆಯ ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮೇ 16ರಿಂದ ಜೂನ್ 8ರ ನಡುವೆ ಭಾರತ ಮತ್ತು ಮ್ಯಾನ್ಮಾರ್ ಸೇನಾಪಡೆ ಯೋಧರು ಸಂಯೋಜಿತವಾಗಿ ಈ ದಾಳಿಗಳನ್ನು ಸಂಘಟಿಸಿದ್ದರು. ಈ ಹಿನ್ನಲೆಯಲ್ಲಿ, ಭಾರತ ಮತ್ತು ಮ್ಯಾನ್ಮಾರ್ ಜಂಟಿಯಾಗಿ ಸೇರಿಕೊಂಡು ಈಶಾನ್ಯ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆ ಸಂಘಟನೆಗಳ ಶಿಬಿರಗಳ ಮೇಲೆ ದಾಳಿ ನಡೆಸಿವೆ.