ಬೆಂಗಳೂರು, ಮಾ.31 (DaijiworldNews/AA): ಐಸ್ಕ್ರೀಂ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್ ನೀಡಿದ್ದು, ಐಸ್ಕ್ರೀಂ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಐಸ್ಕ್ರೀಂ ಸ್ಯಾಂಪಲ್ಗಳನ್ನು ಲ್ಯಾಬ್ಗೆ ರವಾನೆ ಮಾಡಿದ್ದಾರೆ.

ಪ್ಲಾಸ್ಟಿಕ್ ಇಡ್ಲಿ, ಕಲ್ಲಂಗಡಿ, ಕಬಾಬ್, ಗೋಬಿ ಮಂಚೂರಿ, ಪನ್ನೀರ್, ಗೋಲ್ ಗಪ್ಪಾ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಐಸ್ಕ್ರೀಂ ಹಾಗೂ ಕೇಕ್ನ ಟೆಸ್ಟಿಂಗ್ಗೆ ಮುಂದಾಗಿದ್ದಾರೆ.
ಅಧಿಕಾರಿಗಳು ಪ್ರತಿ ತಿಂಗಳು ಕೂಡ ಆಹಾರ ಪದಾರ್ಥಗಳನ್ನ ತಪಾಸಣೆ ಮಾಡುತ್ತಾರೆ. ಇದೀಗ ಬೇಸಿಲ ಬೇಗೆ ಹೆಚ್ಚಾಗಿರುವುದರಿಂದ ಜನರು ತಂಪು ಪಾನೀಯವನ್ನ, ಐಸ್ಕ್ರೀಂ ಅನ್ನು ಜಾಸ್ತಿ ಸೇವಿಸುತ್ತಾರೆ. ಐಸ್ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಅಧಿಕಾರಿಗಳು ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಸ್ಯಾಂಪಲ್ಗಳನ್ನು ಲ್ಯಾಬ್ಗೆ ರವಾನೆ ಮಾಡಿದ್ದಾರೆ.
ಇನ್ನು ಐಸ್ಕ್ರೀಂ ಬಳಿಕ ಕೇಕ್ನ ಸರದಿ. ವಿವಿಧ ಬಣ್ಣಗಳ ಕೇಕ್ ತಯಾರಿಸಲು ಕೆಮಿಕಲ್ ಬಳಕೆ ಮಾಡುತ್ತಾರೆ ಎನ್ನಲಾಗಿದೆ. ಕಲರ್ ಬಳಕೆ, ಕೆಮಿಕಲ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆಹಾರ ತಜ್ಞರು ಅಭಿಪ್ರಯಪಟ್ಟಿದ್ದಾರೆ.