ರಾಂಚಿ, ಏ.01 (DaijiworldNews/AA): ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ಎರಡು ಗೂಡ್ಸ್ ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಇಬ್ಬರು ಲೋಕೋ ಪೈಲಟ್ ಸೇರಿದಂತೆ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ರೈಲಿನ ಇಂಜಿನ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಮೂವರು ಸಿಐಎಸ್ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬೆಳಗಿನ ಜಾವ 3.30ರ ಸುಮಾರಿಗೆ ಈ ಅವಘಡ ನಡೆದಿದೆ. ಫರಕ್ಕಾದಿಂದ ಲಾಲ್ಮಾಟಿಯಾಗೆ ಗೂಡ್ಸ್ ರೈಲು ಬರ್ಹೆತ್ನಲ್ಲಿ ನಿಂತಿದ್ದ ಸರಕು ರೈಲಿಗೆ ಢಿಕ್ಕಿ ಹೊಡೆದಿದೆ. ಕಲ್ಲಿದ್ದಲು ತುಂಬಿದ್ದ ಹಿನ್ನಲೆ ವೇಗವಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.