ಅಯೋಧ್ಯೆ,ಜೂ.16(Daijiworld News/AZM): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಈ ಕುರಿತು ಅಯೋಧ್ಯೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮ ಮಂದಿರವನ್ನು ನಿರ್ಮಿಸುವ ಧೈರ್ಯವಿದೆ ಮತ್ತು ಅವರನ್ನು ತಡೆಯಲು ಯಾರೂ ಇಲ್ಲ ಎಂದು ತಿಳಿಸಿದರು.
ಬಳಿಕ ಅವರು ತಮ್ಮ ಪುತ್ರ ಆದಿತ್ಯ ಠಾಕ್ರೆ ಜೊತೆ ರಾಮ್ ಲಲ್ಲಾದಲ್ಲಿ ಪ್ರಾರ್ಥನೆ ನೆರವೇರಿಸಿದರು. ಚುನಾವಣೆಯ ನಂತರ ಮತ್ತೊಮ್ಮೆ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂದು ಕಳೆದ ನವೆಂಬರ್ ನಲ್ಲಿ ಉದ್ಧವ್ ಠಾಕ್ರೆ ತಿಳಿಸಿದ್ದರು.