ಗುಜರಾತ್, ನವದೆಹಲಿ, ಏ. 02(DaijiworldNews/TA): ಮಹಾತ್ಮ ಗಾಂಧಿಯವರ ಮೊಮ್ಮಗಳು ನೀಲಾಂಬೆನ್ ಪಾರಿಖ್ (92) ನಿಧನರಾಗಿದ್ದಾರೆ. ಅವರು ಮಂಗಳವಾರ ಬೆಳಿಗ್ಗೆ ನವಸಾರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ನೀಲಾಂಬೆನ್, ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ ಅವರ ಐದು ಮಕ್ಕಳಲ್ಲಿ ಹಿರಿಯವರಾದ ರಾಮಿಬೆನ್ ಅವರ ಮಗಳು. ಅವರು ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ಅವರು ಮಹಾತ್ಮ ಗಾಂಧಿಯವರ ಮಗ ಹರಿದಾಸ್ ಗಾಂಧಿಯವರ ಮೊಮ್ಮಗಳು. ನೀಲಾಂಬೆನ್ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರೊಂದಿಗೆ ನವಸಾರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು.ಅವರ ಅಂತ್ಯಕ್ರಿಯೆಯ ಮೆರವಣಿಗೆ ಇಂದು ಬೆಳಿಗ್ಗೆ ನಡೆಯಲಿದೆ ಎಂದು ಹೇಳಲಾಗಿದೆ. ವೀರ್ವಾಲ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ನೀಲಾಂಬೆನ್ ಗಾಂಧಿವಾದಿ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದರು, ತಮ್ಮ ಜೀವನವನ್ನು ವ್ಯಾರ (ಸತ್ಯ) ಕ್ಕೆ ಅರ್ಪಿಸಿದರು ಮತ್ತು ತಮ್ಮ ಜೀವಿತಾವಧಿಯಲ್ಲಿ ಮಹಿಳಾ ಕಲ್ಯಾಣ ಮತ್ತು ಮಾನವ ಕಲ್ಯಾಣಕ್ಕೆ ಕೊಡುಗೆಗಳನ್ನು ನೀಡಿದರು. ಯಾವುದೇ ನೋವಿಲ್ಲದೆ ಅಮ್ಮ ಕಣ್ಮುಚ್ಚಿದ್ದಾರೆ ಎಂದು ಮಗ ಸಮೀರ್ ಹೇಳಿದ್ದಾರೆ. ವರು ಕುಟುಂಬದ ಮೇಲೆ ಗಾಂಧಿವಾದಿ ಸಿದ್ಧಾಂತಗಳನ್ನು ಹೇರದಿದ್ದರೂ, ಅವರ ವೈಯಕ್ತಿಕ ಮೌಲ್ಯಗಳೇ ಅವರ ಜೀವನದಲ್ಲಿ ಅವರಿಗೆ ಸ್ಫೂರ್ತಿ ನೀಡಿತು ಎಂದು ಡಾ. ಪಾರಿಖ್ ಹೇಳಿಕೆ ನೀಡಿದ್ದಾರೆ.