ಭೋಪಾಲ್, ಏ.02 (DaijiworldNews/AA): ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ನಕ್ಸಲರ ಹತ್ಯೆಯಾದ ಘಟನೆ ಭೋಪಾಲ್ನ ಮಂಡ್ಲಾ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಿಜಿಪಿ ಕೈಲಾಶ್ ಮಕ್ವಾನಾ ಅವರು, ಎನ್ಕೌಂಟರ್ ಸಂದರ್ಭದಲ್ಲಿ ಎಸ್ಎಲ್ಆರ್ ರೈಫಲ್, ಸಾಮಾನ್ಯ ರೈಫಲ್, ವೈರ್ಲೆಸ್ ಸೆಟ್ ಮತ್ತು ಕೆಲವು ದೈನಂದಿನ ಸಾಮಗ್ರಿ ಸ್ಥಳದಲ್ಲಿ ಪತ್ತೆಯಾಗಿದೆ. ಇಬ್ಬರೂ ಮಹಿಳಾ ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಕನ್ಹಾ ಹುಲಿ ಸಂರಕ್ಷಿತ ಪ್ರದೇಶದ ಪರ್ಸಟೋಲಾ ಬಳಿ ಮಾವೋವಾದಿಗಳಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿ ಆಧರಿಸಿ ಬೆಳಗ್ಗೆ ಭದ್ರತಾ ಪಡೆಗಳನ್ನು ಶೋಧ ಕಾರ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ.