ಕೋಲಾರ,ಜೂ16(Daijiworld News/AZM): ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹಿಡಿದ ಪರಿಣಾಮ ಮನೆಯೊಳಗಿದ್ದ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ಸಾವನ್ನಪ್ಪಿರುವ ಘಟನೆ ಇಂದು ವರದಿಯಾಗಿದೆ.
ಕೋಲಾರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಎಸ್.ನಾಗಪ್ರಕಾಶ್(58) ಮೃತ ವ್ಯಕ್ತಿ. ಕೋಲಾರದ ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ನಾಗಪ್ರಕಾಶ್ ಅವರು ಸಾವನ್ನಪ್ಪಿದರೆ,ಮನೆಯಲ್ಲಿದ್ದ ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಮುಂಜಾನೆ ನಾಲ್ಕರ ಸುಮಾರಿಗೆ ಘಟನೆ ನಡೆದಿದ್ದು ಬೆಂಕಿ ಹೊತ್ತಿದ್ದ ಕಾರಣ ಮನೆಯಲ್ಲಿದ್ದ ಟಿವಿ ಮತ್ತಿತರೆ ವಸ್ತುಗಳು ಸುಟ್ಟುಹೋಗಿದೆ.
ಘಟನೆಯಲ್ಲಿ ನಾಗಪ್ರಕಾಶ್ ಅವರಿಗೆ ಬೆಂಕಿ ತಗುಲಿದೆ, ದಟ್ಟ ಹೊಗೆಯ ಕಾರಣ ಉಸಿರಾಡಲೂ ಕಷ್ಟವಾಗಿ ಅಸುನೀಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ಪಟ್ಟಣದ ಸ್ಮಶಾನದಲ್ಲಿ ನೆರವೇರಿದೆ.