ದೆಹಲಿ, ಜೂ 16 (Daijiworld News/SM): ಸೋಮವಾರದಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅದಕ್ಕೆ ಒಂದು ದಿನ ಮೊದಲು ಕೇಂದ್ರ ಸರಕಾರದಿಂದ ಸರ್ವ ಪಕ್ಷಗಳ ಸಭೆ ನಡೆದಿದೆ. ಕೃಷಿ ವಲಯದ ಮೇಲಿನ ಒತ್ತಡ, ನಿರುದ್ಯೋಗ ಹಾಗೂ ಬರ ಪರಿಸ್ಥಿತಿಯ ಕುರಿತಂತೆ ಸದನದಲ್ಲಿ ಪ್ರಮುಖವಾಗಿ ಚರ್ಚಿಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡ ಲೋಕಸಭೆ ಹಾಗೂ ರಾಜ್ಯ ಸಭೆಯನ್ನು ಪ್ರತಿನಿಧಿಸುವ ಎಲ್ಲ ಪಕ್ಷಗಳ ಮುಖ್ಯಸ್ಥರ ಸಭೆಯನ್ನು ಜೂನ್ ಹತ್ತೊಂಬತ್ತರಂದು ಪ್ರಧಾನಿ ಕರೆದಿದ್ದು, "ಒಂದು ದೇಶ, ಒಂದು ಚುನಾವಣೆ" ವಿಚಾರವಾಗಿ ಚರ್ಚೆ ಮಾಡಲಿದ್ದಾರೆ.