ಚಿಕ್ಕಮಗಳೂರು,ಏ.10(DaijiworldNews/TA): ಕಡೂರು ಪಟ್ಟಣದ ಕಲ್ಲುಗುಂಡಿಯಲ್ಲಿ ಸ್ಫೋಟಕಗಳನ್ನು ಅಕ್ರಮವಾಗಿ ಶೇಖರಿಸಿದ್ದ ವ್ಯಕ್ತಿಯನ್ನು ಆಂತರಿಕ ಭದ್ರತಾ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬಂಧಿತ ಆರೋಪಿಯನ್ನು ವೆಂಕಟೇಶ್ ಎಂಬುವುದಾಗಿ ಗುರುತಿಸಲಾಗಿದೆ. ಆರೋಪಿ ಕಲ್ಲು ಕೋರೆಗಳಲ್ಲಿ ಸೈಜ್ ಬಳಸುವ 388 ಜಿಲೆಟಿನ್ ಪೆಸ್ಟ್ ಟ್ಯೂಬ್, 250 ಅಡಿ ಬತ್ತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಎಂದು ಹೇಳಲಾಗಿದೆ.
ಪೊಲೀಸರ ತಂಡ ಆರೋಪಿಯ ಮನೆ ಮೇಲೆ ದಾಳಿ ನಡೆಸಿದ್ದು, ಆತನನ್ನು ಬಂಧಿಸಿ, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.