ಕೋಲ್ಕತ್ತಾ, ಜೂ 17(Daijiworld News/MSP): ಗಂಗಾ ನದಿಯ ಉಪನದಿಯಾದ ಹೂಗ್ಲಿ ನದಿಗೆ ಹಾರಿ, ವಿಶ್ವ ಪ್ರಸಿದ್ಧ ಮಾಂತ್ರಿಕ ಹ್ಯಾರಿ ಹೌದಿನಿ ಹ್ಯಾರಿಯಂತೆ ಅತ್ಯಂತ ಅಪಾಯಕಾರಿ ಅಂಡರ್ವಾಟರ್ ಎಸ್ಕೇಪ್ ಮ್ಯಾಜಿಕ್ ಮಾಡಲು ಯತ್ನಿಸಿದ ಕೋಲ್ಕತ್ತಾದ ಜಾದೂಗಾರ ಚಂಚಲ್ ಲಾಹಿರಿ ನಾಪತ್ತೆಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಅಂಡರ್ವಾಟರ್ ಎಸ್ಕೇಪ್ ಮ್ಯಾಜಿಕ್ ಮಾಡಲೆಂದು ತಮ್ಮ ಕೈಕಾಲುಗಳನ್ನು ಸಂಕೋಲೆಯಿಂದ ಬಿಗಿದುಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಬಂಧಿಯಾಗಿ ಸಾರ್ವಜನಿಕರ ಸಮ್ಮುಖದಲ್ಲಿ ಇಲ್ಲಿನ ಮಿಲೇನಿಯಮ್ ಪಾರ್ಕ್ ಪ್ರದೇಶದ ಹೌರಾ ಸೇತುವೆಯ 28ನೇ ಪಿಲ್ಲರ್ ಕೆಳಗಿಂದ ಗಂಗಾ ನದಿಗೆ ಧುಮುಕಿದ್ದರು. ಆದರೆ ಬಳಿಕ ಇವರು ಕಣ್ಮರೆಯಾಗಿದ್ದಾರೆ.
ಆದರೆ ನಿಗದಿತ ಸಮಯ ಮೀರಿದರೂ ಬಂಧಮುಕ್ತರಾಗಿ ನದಿಯಿಂದ ಮೇಲೆ ಬರುವಲ್ಲಿ ಲಾಹಿರಿ ವಿಫಲರಾಗುವ ಹಲವರು ಚಿಂತೆ, ಕಳವಳದಿಂಡ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಕೋಲ್ಕತಾ ಪೊಲೀಸರು ವಿಪತ್ತು ನಿರ್ವಹಣಾ ತಂಡದೊಂದಿಗೆ ಭಾನುವಾರ ದಿನ ಪೂರ್ತಿ ಲಾಹಿರಿಗಾಗಿ ಶೋಧ ನಡೆಸಿದರು. "ನಾವು ಜಾದುಗಾರನ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ, ಆದರೆ ಅವರು ಗಂಗಾ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ, ಮುಳುಗುತಜ್ಞರು ಅವರಿಗಾಗಿ ಶೋಧಿಸಿದ್ದು, ಆದರೆ ಅವನನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾನುವಾರ ರಾತ್ರಿ ಕಾರಣದಿಂಡ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು ಮತ್ತು ಸೋಮವಾರ ಪುನರಾರಂಭಗೊಂಡಿದೆ. ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಜಾದುಗಾರ ಚಂಚಲ್ ಅವರು ಈ ಅಪಾಯಕಾರಿ ಮ್ಯಾಜಿಕ್ ಮಾಡಲು ಅವರಿಗೆ ಅನುಮತಿ ಕೊಟ್ಟವರು ಯಾರು ಎಂಬುದನ್ನು ಪೊಲೀಸರು ಈಗ ತನಿಖೆ ಮಾಡುತ್ತಿದ್ದಾರೆ.