ನವದೆಹಲಿ,ಜೂ 17(Daijiworld News/MSP): ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ನೂತನ ಸರ್ಕಾರದ ಪ್ರಥಮ ಲೋಕಸಭಾ ಅಧಿವೇಶನ ಸೋಮವಾರ ಆರಂಭವಾಗಿದ್ದು, ಆರಂಭವಾಗುತ್ತಿದೆ. ಆದರೆ ಮೊದಲ ಅಧಿವೇಶನಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೈರಾಗಿದ್ದಾರೆ.
ಲೋಕಸಭೆಯ ನೂತನ ಸ್ಪೀಕರ್ ವೀರೇಂದ್ರ ಕುಮಾರ್ ಇಂದು ಹಲವು ಸಂಸದರಿಗೆ ಸಂಸತ್ತಿನಲ್ಲಿ ಪ್ರಮಾಣವಚನ ಬೋಧಿಸಿದರು. ಆದರೆ ಈ ಸಂದರ್ಭ ರಾಹುಲ್ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ನೂತನ ಸಂಸದರಿಗೆ ಸ್ಪೀಕರ್ ಪ್ರಮಾಣ ವಚನ ಬೋಧಿಸುವ ಸಂದರ್ಭ ರಾಹುಲ್ಗಾಂಧಿ ಅವರ ಹೆಸರನ್ನು ಕೂಡ ಕರೆಯಲಾಗಿದೆ.ಆದರೆ ರಾಹುಲ್ ಈ ವೇಳೆ ಸದನದಲ್ಲಿ ಹಾಜರಿರಲಿಲ್ಲ.
ಲಂಡನ್ ಪ್ರವಾಸದಲ್ಲಿರುವ ರಾಹುಲ್ ಅಧಿವೇಶದ ವೇಳೆ ಹಿಂತಿರುಗುತ್ತಾರೆ ಎನ್ನಲಾಗಿತ್ತು. ಇನ್ನು ಸದನಕ್ಕೆ ಗೈರಾಗಿರುವ ಬಗ್ಗೆ ಪಕ್ಷದ ವತಿಯಿಂದ ಯಾವುದೇ ಅಧಿಕೃತ ವಿವರಣೆ ನೀಡಿಲ್ಲ. ಸದನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಗೈರು ಹಾಜರಾಗಿರುವ ಬಗ್ಗೆ ಬಿಜೆಪಿ ಪ್ರಶ್ನಿಸಿದೆ. ಸದನಕ್ಕೆ ಹಾಜರಾಗದಿರುವ ರಾಹುಲ್ ಗಾಂಧಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವವಿದೆಯೇ ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಪ್ರಶ್ನಿಸಿದ್ದಾರೆ.