ಮಂಡ್ಯ, ಜೂ 16 (Daijiworld News/SM): ಸಾಲ ಬಾಧೆಯನ್ನು ತಾಳಲಾರದೆ ರೈತನೊಬ್ಬ ಸಿಎಂಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಸಾಲಬಾಧೆ ತಾಳಲಾಗದೆ ಸುರೇಶ್ (45) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಅವರು ತನ್ನ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಆಹ್ವಾನಿಸಿ ವೀಡಿಯೋ ಸಂದೇಶ ಕಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಸಿಎಂ ಅವರ ಅಭಿಮಾನಿಯಾಗಿದ್ದರು ಎಂದು ತಿಳಿದು ಬಂದಿದೆ. ತಾನು ರವಾನಿಸಿರುವ ವೀಡಿಯೋದಲ್ಲಿ ಬಡ ರೈತರನ್ನು ಕಾಪಾಡಿ ಎಂದು ಸಿಎಂ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರೈತರ ವಿಚಾರವಾಗಿ ಆಶ್ವಾಸನೆ ಮಾತ್ರ ನೀಡದೆ ನಿಜವಾಗಿ ಸಮಸ್ಯೆಗಳನ್ನು ಪರಿಹರಿಸುತ್ತೀರಿ ಎಂದು ನಂಬಿದ್ದೇನೆ" ಎಂದಿದ್ದಾರೆ. ರವಿವಾರ ಬೆಳಗ್ಗೆ ರೈತ ಸುರೇಶ್ ತಮ್ಮ ಜಮೀನಿನ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತನ ಅಂತ್ಯ ಸಂಸ್ಕಾರ ನಡೆದ ತರುವಾಯ ಈ ವೀಡಿಯೋ ಅವರ ಕುಟುಂಬದವರಿಗೆ ದೊರಕಿದ್ದು ಇದೀಗ ವೈರಲ್ ಆಗಿದೆ.