ವರ್ಧಾ,ಜೂ17(DaijiworldNews/AZM):ಎಂಟರ ಹರೆಯದ ದಲಿತ ಬಾಲಕ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಬಿಸಿ ಹೆಂಚಿನ ಮೇಲೆ ಕುಳಿತುಕೊಳ್ಳುವ ಶಿಕ್ಷೆ ನೀಡಿದ ಘಟನೆ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಮೋಲ್(32) ಎಂಬಾತ ದೇವಸ್ಥಾನದ ಪ್ರಾಂಗಣದಲ್ಲಿ ಆಡುತ್ತಿದ್ದ ಬಾಲಕನನ್ನು ಗದರಿಸಿ ಆತ ಕಾಣಿಕೆ ಹುಂಡಿಯಿಂದ ಚಿಲ್ಲರೆ ಕದಿಯುತ್ತಿದ್ದ ಎಂದು ಆರೋಪಿಸಿದ್ದಾನೆ. ಬಳಿಕ ಬಾಲಕನನ್ನು ಕಟ್ಟಿ ಹಾಕಿದ ಆರೋಪಿ ಆತನನ್ನು ದೇವಸ್ಥಾನದ ಆವರಣದಲ್ಲಿ ಸಂಗ್ರಹಿಸಿಟ್ಟಿದ್ದ ಬಿಸಿ ಹೆಂಚಿನ ಮೇಲೆ ನಿಲ್ಲುವಂತೆ ಮಾಡಿದ್ದಾನೆ. ಇದರಿಂದ ಬಾಲಕನಿಗೆ ಸುಟ್ಟ ಗಾಯಗಳಾಗಿದ್ದು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನ ತಂದೆ ನೀಡಿದ ದೂರಿನಂತೆ ಪೊಲೀಸರು ಆರೋಪಿ ಅಮೋಲ್ ದೊರೆ(32)ಎಂಬಾತನನ್ನು ಬಂಧಿಸಿದ್ದಾರೆ. ಹಾಗೂ ಆತನ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ)ಕಾಯ್ದೆ- 1989ಅಡಿ ಪ್ರಕರಣ ದಾಖಲಿಸಿದ್ದಾರೆ.