ಅನಂತ್ನಾಗ್, ಜೂ18(Daijiworld News/SS): ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಬಿಜ್ಬಿಹಾರ ಪಟ್ಟಣದ ಸಮೀಪವಿರುವ ಮರ್ಹಮಾ ಸಂಗಮ್ ಗ್ರಾಮದಲ್ಲಿ ಭದ್ರತಾಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಈ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ.
ಉಗ್ರರು ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಮನೆಯೊಂದನ್ನು ಸುತ್ತುವರಿದ ಭದ್ರತಾಪಡೆ ಸಿಬ್ಬಂದಿ ಶರಣಾಗುವಂತೆ ಉಗ್ರರಿಗೆ ಸೂಚಿಸಿದರು. ಆದರೆ, ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ, ಭದ್ರತಾಪಡೆಗಳು ಪ್ರತಿದಾಳಿ ಮಾಡಿದ್ದಾಗಿ ತಿಳಿದುಬಂದಿದೆ. ಈ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಯೋಧರೊಬ್ಬರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಜೂ.17ರಂದು ಕಾರ್ಯಾಚರಣೆಯಲ್ಲಿ ಮೇಜರ್ ಒಬ್ಬರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿ ಒಬ್ಬ ಅಧಿಕಾರಿ ಹಾಗೂ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.