ನವದೆಹಲಿ, ಜೂ18(Daijiworld News/SS): ಆಟೋರಿಕ್ಷಾ ಪ್ರಯಾಣ ದರ ನವದೆಹಲಿಯಲ್ಲಿ ಇಂದಿನಿಂದ ಶೇ.18ರಷ್ಟು ಏರಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಟೋ ದರ ಏರಿಕೆಯ ಜೊತೆಗೆ ಮತ್ತೊಂದು ಹೊಸ ನಿಯಮ ಜಾರಿಗೆ ಬಂದಿದೆ. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡರೆ ಅದಕ್ಕೂ ಆಟೋ ಪ್ರಯಾಣಿಕರು ಪ್ರತ್ಯೇಕ ಹಣ ತೆರಬೇಕಿದೆ. ಮೊದಲು 1.5 ಕಿ.ಮೀಗೆ 25 ರೂ ನಿಗದಿ ಮಾಡಲಾಗಿದೆ. ಕಿಲೋಮೀಟರ್ ದರ 8-9.5 ರೂಗೆ ಏರಿಕೆಯಾಗಿದೆ. ಲಗೇಜುಗಳಿದ್ದರೆ 7.5 ರೂ ನೀಡಬೇಕಾಗುತ್ತದೆ ಎನ್ನಲಾಗಿದೆ.
ಒಂದೊಮ್ಮೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡರೆ ಪ್ರತಿ ನಿಮಿಷಕ್ಕೆ 0.75 ಪೈಸೆಯಂತೆ ಚಾಲಕರಿಗೆ ನೀಡಬೇಕಾಗುತ್ತದೆ. ದೆಹಲಿಯಲ್ಲಿ ಒಟ್ಟು 90 ಸಾವಿರ ಆಟೋ ರಿಕ್ಷಾಗಳು ನೋಂದಣಿಯಾಗಿವೆ. ಕಳೆದ ವಾರವಷ್ಟೇ ದೆಹಲಿ ಸರ್ಕಾರ ಈ ಹೊಸ ದರವನ್ನು ಪ್ರಕಟಿಸಿತ್ತು.
ನವದೆಹಲಿಯಲ್ಲಿ ಇಂದಿನಿಂದ ದರ ಜಾರಿಗೆ ಬರಲಿದೆ.