ಬೆಂಗಳೂರು, ಜೂ 18 (Daijiworld News/SM): ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.
ದಿನೇಶ್ ಗುಂಡೂರಾವ್ ಆದೇಶದ ಮೇರೆಗೆ ಅಮಾನತು ಮಾಡಲಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ಸಿದ್ದರಾಮಯ್ಯ, ಗುಂಡೂರಾವ್, ವೇಣುಗೋಪಾಲ್ ಸೇರಿದಂತೆ ಹಲವರ ವಿರುದ್ಧ ರೋಷನ್ ಬೇಗ್ ಮಾತನಾಡಿದ್ದರು. ಅಲ್ಲದೆ ಇತ್ತೀಚೆಗೆ ಸಾಕಷ್ಟು ವಿವಾದವನ್ನುಂಟು ಮಾಡಿರುವ ಐಎಂಎ ಹಗರಣದಲ್ಲೂ ಕೂಡ ಕಾಂಗ್ರೆಸ್ ವಿರುದ್ಧ ಬೇಗ್ ಧ್ವನಿ ಎತ್ತಿದ್ದಾರೆ.