ನವದೆಹಲಿ, ಮೇ. 10 (DaijiworldNews/AA): ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಆರೋಪ ಮಾಡುತ್ತಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದರು.

ಶನಿವಾರ ಭಾರತ ಹಾಗೂ ಪಾಕ್ ನಡುವಿನ ಕದನ ವಿರಾಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್400 ಕ್ಷಿಪಣಿ, ಬ್ರಹ್ಮೋಸ್ ನೆಲೆ ನಾಶವಾಗಿಲ್ಲ. ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಆರೋಪಗಳನ್ನ ಮಾಡ್ತಿದೆ. ಚಂಡೀಗಢದಲ್ಲಿ ಪಾಕ್ ಶೆಲ್ ಮೇಲೆ ದಾಳಿ ಮಾಡಿರೋದು ಸುಳ್ಳು ಸುದ್ದಿಯಾಗಿದೆ. ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್ಗಳನ್ನ ಹೊಡೆದುರುಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆಯು ಕೇವಲ ಪಾಕ್ನ ಸೇನಾವಲಯಗಳನ್ನ ಮಾತ್ರ ಗುರಿ ಮಾಡಿ ದಾಳಿ ಮಾಡಿದೆ. ಪಾಕಿಸ್ತಾನ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದೆ. ನಮ್ಮ ದಾಳಿಯಿಂದ ಪಾಕಿಸ್ತಾನ ಸೇನೆಗೆ ಸಾಕಷ್ಟು ನಷ್ಟವಾಗಿದೆ ಎಂದು ಹೇಳಿದರು.
ಭಾರತೀಯ ಸೇನೆಯು ಪಾಕಿಸ್ತಾನದ ಯಾವುದೇ ಮಸೀದಿಗಳನ್ನ ಟಾರ್ಗೆಟ್ ಮಾಡಿಲ್ಲ. ಕೇವಲ ಪಾಕ್ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ್ದೇವೆ. ಪಾಕಿಸ್ತಾನ ಏರ್ಬೇಸ್ಗಳನ್ನ ಹೊಡೆದುರುಳಿಸಿದ್ದೇವೆ. ಎಲ್ಓಸಿಯಲ್ಲಿಯೂ ಪಾಕಿಸ್ತಾನ ಗುಂಡಿನ ದಾಳಿ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಭಾರತ ದಾಳಿ ಮಾಡಿದ ವೇಳೆ ಅವರಿಗೂ ನಷ್ಟವಾಗಿದೆ. ಎಲ್ಲಾ ಸಮಯದಲ್ಲೂ ನಮ್ಮ ಸೇನೆ ಅಲರ್ಟ್ ಇರಲಿದೆ. ಪಾಕ್ ದಾಳಿಗೆ ಪ್ರತಿದಾಳಿ ಮಾಡಲು ಸಿದ್ಧರಾಗಿದ್ದೇವೆ ಎಂದರು.