ನವದೆಹಲಿ, ಜೂ19(Daijiworld News/SS): ರೋಶನ್ ಬೇಗ್ ಅವರನ್ನು ಉಚ್ಛಾಟಿಸಿದ್ದು ಗೊತ್ತೇ ಇಲ್ಲ, ಈಗ ಯಾರೋ ಇಲ್ಲಿ (ಎಐಸಿಸಿ) ಕಚೇರಿಯಲ್ಲಿ ಮಾತನಾಡುತ್ತಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ರೋಷನ್ ಬೇಗ್ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ರೋಶನ್ ಬೇಗ್ ಅವರನ್ನು ಉಚ್ಛಾಟಿಸಿದ್ದು ಗೊತ್ತೇ ಇಲ್ಲ, ಈಗ ಯಾರೋ ಇಲ್ಲಿ (ಎಐಸಿಸಿ) ಕಚೇರಿಯಲ್ಲಿ ಮಾತನಾಡುತ್ತಿದ್ದರು. ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಮಾಹಿತಿ ಪಡೆದುಕೊಂಡು ಮಾತನಾಡುವುದಾಗಿ ಹೇಳಿದರು.
ಪಕ್ಷದಲ್ಲಿ ಶಿಸ್ತು ಕಾಪಾಡುವುದು ಅನಿವಾರ್ಯ, ಸಿದ್ದರಾಮಯ್ಯ ಅವರು ಸಿಎಲ್ಪಿ ನಾಯಕರು ಅವರಿಗೆ ಗೌರವ ಕೊಡಲೇ ಬೇಕು. ಪಕ್ಷದ ಅಧ್ಯಕ್ಷರಿಗೂ ಗೌರವ ಕೊಡಲೇ ಬೇಕು. ವ್ಯಕ್ತಿ ಪೂಜೆ ತಪ್ಪು ಎಂಬುದನ್ನು ಮುಂಚಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ವ್ಯಕ್ತಿ ಪೂಜೆ ಮಾಡುವ ಬದಲು, ಪಕ್ಷದ ಪೂಜೆಯನ್ನು ಮಾಡಬೇಕು. ನಾವು ಗಾಂಧಿ ಕುಟುಂಬಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರು ಎಂದು ಅವರು ಹೇಳಿದರು.
ಸಿದ್ದರಾಮಯ್ಯ ನಮ್ಮ ಸಿಎಲ್ಪಿ ನಾಯಕರು. ಅವರಿಗೆ ಎಷ್ಟು ಗೌರವ ನೀಡಬೇಕೋ ಅಷ್ಟನ್ನು ನೀಡಲೇಬೇಕು. ಹಾಗೆಯೇ ಪಕ್ಷದ ಅಧ್ಯಕ್ಷರಿಗೂ ನೀಡಬೇಕು. ಶಾಸಕರಿಗೂ ಗೌರವ ನೀಡಲೇಬೇಕು. ಹಾಗೆಯೇ ಪಕ್ಷದಲ್ಲಿ ಶಿಸ್ತು ಕಾಪಾಡುವುದು ಅನಿವಾರ್ಯ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀವೇ ಅಧ್ಯಕ್ಷರಾಗಿರಬೇಕೆಂದು ಕೇಳಿಕೊಂಡಿದ್ದೇನೆ. ರಾಹುಲ್ ಗಾಂಧಿ ನಾಯಕತ್ವ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದೆ ಎಂದು ಹೇಳಿದರು.