ಚಿಕ್ಕಮಗಳೂರು, ಜೂ 19 (Daijiworld News/MSP): ಜ್ಯೋತಿಷಿಯೊಬ್ಬನ ಮಾತು ಕೇಳಿದ ತಂದೆಯೊಬ್ಬ ತನ್ನ ಒಂದೂವರೆ ತಿಂಗಳ ಹಸುಗೂಸನ್ನು ಕತ್ತು ಹಿಚುಕಿ ಕೊಂದ ಘಟನೆ ಚಿಕ್ಕಮಗಳೂರಿನ ಬೂಚೇನಹಳ್ಳಿ ಕಾವಲ್ ನಲ್ಲಿ ನಡೆದಿದೆ.
ಹೆಣ್ಣು ಮಗು ಮುಂದೆ ಭವಿಷ್ಯಕ್ಕೆ ಕಂಟಕವಾಗುತ್ತದೆ ಎಂದು ಜ್ಯೋತಿಷಿಯೊಬ್ಬ ಮಾತು ನಂಬಿದ ಕ್ರೂರಿ ತಂದೆ ಮಂಜುನಾಥ್ ( 27) ಮುಗ್ದ ಮಗುವೆಂದು ನೋಡದೆ ಕತ್ತು ಹಿಚುಕಿ ಸಾಯಿಸಿದ್ದಾನೆ.
ಮಗುವಿನ ತಾಯಿ ಅಡುಗೆ ಕೆಲಸದಲ್ಲಿ ನಿರತನಾಗಿದ್ದ ಸಂದರ್ಭ, ತನಗೆ ಯಾಕೋ ಅನಾರೋಗ್ಯ ಕಾಡುತ್ತಿದೆ ಎಂದು ನೆಪ ಹೇಳಿ ಮಗುವಿನ ಪಕ್ಕದಲ್ಲಿ ಮಲಗಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆ ಬಳಿಕ ಮಗುವಿನ ಮೂಗಿನಲ್ಲಿ ರಕ್ತ ಬರುತ್ತಿದೆ ನೋಡು ಎಂದು ಪತ್ನಿಯ ಕರೆದು ನಾಟಕವಾಡಲಾರಂಭಿಸಿದ್ದಾನೆ. ತಾಯಿ ಗಾಬರಿಯಿಂದ ಸುತ್ತಮುತ್ತದವರಿಗೆ ತಿಳಿಸಿ 108 ಕ್ಕೆ ಪೋನಾಯಿಸಿದ್ದಾಳೆ. ಆದರೆ ವೈದ್ಯರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಈ ಸಂದರ್ಭ ಹಸುಗೂಸಿನ ಕುತ್ತಿಗೆ ಬಳಿ ಗಾಯದ ಗುರುತು ಪತ್ತೆಯಾಗಿ ಮಗುವಿನ ತಾಯಿ ಇತರರಿಗೆ ಅನುಮಾನ ಬಂದು ವಿಚಾರಿಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರ ಭೇಟಿ ಆರೋಪಿ ಮಂಜುನಾಥನನ್ನು ಬಂಧಿಸಿದ್ದಾರೆ.