ನವದೆಹಲಿ, ಮೇ. 12 (DaijiworldNews/AK) : ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತ ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದೆ.

ಭಾರತೀಯ ಸೇನೆ ಇಂದು ಹಂಚಿಕೊಂಡ ವೀಡಿಯೊದಲ್ಲಿ ಪಾಕಿಸ್ತಾನಿ ಮಿರಾಜ್ನ ಅವಶೇಷಗಳನ್ನು ಕಾಣಬಹುದು. ಇಂದು ಮಧ್ಯಾಹ್ನ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಹಿರಿಯ ಕಮಾಂಡರ್ಗಳು ಏಪ್ರಿಲ್ 22 ರಂದು ಜಮ್ಮು ಮತ್ತು ಪಹಲ್ಗಾಮ್ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ನ ಸಮಗ್ರ ವಿವರವನ್ನು ನೀಡಿದರು.
ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ವೈಸ್ ಮಾರ್ಷಲ್ ಎಕೆ ಭಾರ್ತಿ ಮತ್ತು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.
ಅಧಿಕೃತವಾಗಿ ಭಾರತ ತಿಳಿಸಿರಲಿಲ್ಲ. ಆದರೆ ಇಂದು ಅಧಿಕೃತವಾಗಿ ಮಿರಾಜ್ ವಿಮಾನವನ್ನು ಆಕಾಶದಲ್ಲೇ ಹೊಡೆದು ಹಾಕಿದ್ದೇವೆ ಎಂದು ತಿಳಿಸಿದರು.