ಹೊಸದಿಲ್ಲಿ,ಜೂ20(DaijiworldNews/AZM):ತೆಲುಗು ದೇಶಂ ಪಕ್ಷದ ನಾಲ್ವರು ರಾಜ್ಯಸಭಾ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು,ಇದು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ ಚಂದ್ರಬಾಬು ನಾಯ್ಡುಗೆ ಮತ್ತೊಂದು ಶಾಕ್ ಆಗಿದೆ.
ತೆಲುಗು ದೇಶಂನ ನಾಲ್ವರು ರಾಜ್ಯಸಭಾ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಟಿಡಿಪಿಗೆ ಭಾರಿ ಹೊಡೆತವಾಗಿದೆ.
ಮೂವರು ರಾಜ್ಯಸಭಾ ಸದಸ್ಯರಾದ ವೈ.ಎಸ್. ಚೌಧರಿ, ಟಿಜಿ ವೆಂಕಟೇಶ್, ಸಿಎಂ ರಮೇಶ್ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.