ನವದೆಹಲಿ, ಜೂ 21 (Daijiworld News/MSP): ಪ್ರತಿವರ್ಷ ಜೂನ್ 21ರಂದು 'ಅಂತಾರಾಷ್ಟ್ರೀಯ ಯೋಗದಿನ'ವೆಂದು ಆಚರಿಸುವುದಾಗಿ ವಿಶ್ವಸಂಸ್ಥೆ ಈಗಾಗಲೇ ಘೋಷಿಸಿದೆ. ಈ ಹಿನ್ನಲೆಯಲ್ಲಿ ವಿಶ್ವದೆಲ್ಲೆಡೆ ಇಂದು ಯೋಗದಿನವನ್ನು ಆಚರಣೆ ಮಾಡಲಾಗುತ್ತಿದೆ.
ವಿಶ್ವ ಮನ್ನಣೆ ಪಡೆದ ಯೋಗ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಯೋಗವೆನ್ನುವುದು ಬರೀ ಆಸನ ಪ್ರಾಣಾಯಾಮಗಳ ವ್ಯಾಯಾಮವಲ್ಲ. ಅದೊಂದು ಜೀವನ ವಿಧಾನವಾಗಬೇಕು ಎಂದು ಪ್ರಧಾನಿ ಮೋದಿ ಸಹಿತ ದೇಶದ ಹಲವು ರಾಜಕಾರಣಿಗಳು, ಸಿನಿಮಾ ನಟ-ನಟಿಯರು, ಸೆಲಿಬ್ರಿಟಿಗಳು, ವಿದ್ಯಾರ್ಥಿಗಳು, ಸೈನಿಕರು ಸೇರಿದಂತೆ ಹಲವರು ಯೋಗವನ್ನು ಮಾಡುವ ಮೂಲಕ ವಿಶ್ವಕ್ಕೆ ನಮ್ಮ ಸಂಸ್ಕೃತಿಯನ್ನು ಸಾರುತ್ತಿದ್ದಾರೆ.
ಈ ಮಧ್ಯೆ ಶ್ವಾನ ಕೂಡ ಯೋಗ ಮಾಡಿ ಗಮನ ಸೆಳೆದಿದೆ. ಭಾರತೀಯ ಸೇನೆಯ ಶ್ವಾನದಳದ ಸಿಬ್ಬಂದಿಯೊಂದಿಗೆ ಶ್ವಾನದಳ ಕೂಡಾ ಯೋಗ ಮಾಡಿ ಗಮನ ಸೆಳೆದಿದೆ. ಸಿಬ್ಬಂದಿ ಹಲವು ಆಸನಗಳನ್ನು ಮಾಡುತ್ತಿರುವಾಗ ಅವರೊಂದಿಗೆ ಜತೆಯಾದ ಶ್ವಾನಗಳು ಕೂಡಾ ಯೋಗದ ಹಲವು ಆಸನಗಳನ್ನು ಮಾಡಿದ್ದು ವಿಶೇಷವಾಗಿದೆ.