ನವದೆಹಲಿ, ಜೂ 21 (Daijiworld News/MSP): ಲೋಕಸಭೆಯಲ್ಲಿ ಸಂಸತ್ನ ಮುಂಗಾರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರದ ಪ್ರಮುಖ ಸಾಧನೆಗಳ ಬಗ್ಗೆ ತಮ್ಮ ಭಾಷಣ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಮಾತ್ರ ಮೊಬೈಲ್ನಲ್ಲಿ ತಲ್ಲೀನರಾಗಿದದ್ದು ವೈರಲ್ ಆಗಿತ್ತು.
ರಾಷ್ಟ್ರಪತಿ ಭಾಷಣ ಮಾಡುವ ಸಂದರ್ಭ ಮೊದಲ ಸಾಲಿನಲ್ಲಿ ಕುಳಿತಿದ್ದ ರಾಹುಲ್ ಗಾಂಧಿ, 24 ನಿಮಿಷ ತಮ್ಮ ಮೊಬೈಲ್ನಲ್ಲಿ ಸ್ಕ್ರೋಲ್ ಮಾಡುತ್ತ ಮತ್ತು ಟೈಪ್ ಮಾಡುತ್ತಾ, ಮೊಬೈಲ್ ನೋಡುತ್ತಲೇ ಕಾಲಕಳೆದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಆದರೆ ರಾಹುಲ್ ಗಾಂಧಿಯವರ ಈ ನಡೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿದಿದ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ, ರಾಹುಲ್ ಗಾಂಧಿ ಅವರು ಅನಾವಶ್ಯಕವಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಅಲ್ಲದೆ ಅವರು ರಾಷ್ಟ್ರಪತಿ ಭಾಷಣವನ್ನೇ ಕೇಳಿಲ್ಲ ಎಂಬುವುದು ಶುದ್ದ ಸುಳ್ಳು . ರಾಹುಲ್ ಅವರಿಗೆ ಎಷ್ಟು ಅಗತ್ಯವೋ ಅಷ್ಟು ರಾಷ್ಟ್ರಪತಿಗಳ ಭಾಷಣವನ್ನು ಕೇಳಿಸಿಕೊಂಡಿದ್ದಾರೆ ಎಂದಿದ್ದಾರೆ.
ರಾಹುಲ್ ಅವರು ಮೊಬೈಲ್ ನೋಡಲು ಕಾರಣವಿದೆ. ಅವರಿಗೆ ಕೆಲವು ಹಿಂದಿಯ ಕಷ್ಟದ ಪದಗಳು ಅರ್ಥವಾಗಿರಲಿಲ್ಲ . ಹೀಗಾಗಿ ಮೊಬೈಲ್ ನಲ್ಲಿ ಆ ಪದಗಳ ಟ್ರಾನ್ಸ್ ಲೆಟ್ ಮಾಡುತ್ತಿದ್ದರು. ಇದನ್ನು ದೊಡ್ಡ ವಿಚಾರ ಎಂಬಂತೆ ಬಿಂಬಿಸುವ ಅಗತ್ಯವಿಲ್ಲ ಎಂದು ರಾಹುಲ್ ಅವರ ಮೊಬೈಲ್ ನೋಡುವ ಬಗೆಯನ್ನು ಆನಂದ್ ಶರ್ಮ ಸಮರ್ಥಿಸಿಕೊಂಡರು.