ಬೆಂಗಳೂರು, ಜೂ 22 (Daijiworld News/MSP): ಇಲ್ಲಿನ ಚರ್ಚ್ ಸ್ಟ್ರೀಟ್ನಲ್ಲಿರುವ ಪಬ್ವೊಂದರ 3 ನೇ ಮಹಡಿಯಿಂದ ಆಯತಪ್ಪಿ ಕೆಳ ಬಿದ್ದ ಜೋಡಿಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಮೃತಪಟ್ಟವರನ್ನು ಪವನ್ ಅತ್ತಾವರ್ ಹಾಗೂ ವೇದಾ ಎಂದು ಗುರುತಿಸಲಾಗಿದೆ.
ಚರ್ಚ್ ಸ್ಟ್ರೀಟ್ನ ಮೂರು ಅಂತಸ್ತಿನ ಕಟ್ಟಡದಲ್ಲಿರುವ ಹ್ಯಾಶ್ ಬೀರ್ ಪಬ್ ಗೆ ಪವನ್ ಅತ್ತಾವರ್ ಹಾಗೂ ಅವರ ಸ್ನೇಹಿತ ವೇದಾ ರಾತ್ರಿ ಹೋಗಿದ್ದರು. ಆದರೆ ಈ ಜೋಡಿ ಕಟ್ಟಡದ 3 ನೇ ಮಹಡಿಯಿಂದ ಆಯತಪ್ಪಿ ಕೆಳ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ತೀವ್ರ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿದ್ದಾರೆ.
ಪವನ್ ಹಾಗೂ ವೇದಾ ಇಬ್ಬರಿಗೂ ವಿವಾಹವಾಗಿದ್ದು ಅವರಿಬ್ಬರೂ ಪತ್ನಿ ಮತ್ತು ಪತಿಯಿಂದ ದೂರವಾಗಿದ್ದು ಎಂದು ತಿಳಿದುಬಂದಿದೆ. ಪವನ್ ಅತ್ತಾವರ ಪ್ರತಿಷ್ಠಿತ ಪತ್ರಿಕೆಯೊಂದರ ಮಾರ್ಕೆಟಿಂಗ್ ವಿಭಾಗದ ಉದ್ಯೋಗಿಯಾಗಿದ್ದು, ವೇದಾ ಐಟಿ ಕಂಪೆನಿಯಲ್ಲಿ ಟೆಕ್ಕಿಯಾಗಿದ್ದರು.
ಈ ಘಟನೆ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಪಬ್ ಮಾಲೀಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಕೆಳ ಬೀಳುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.