ತುಮಕೂರು,ಜೂ23(DaijiworldNews/AZM):ಟಿಕ್ ಟಾಕ್ ನಿಂದಾಗಿ ರಾಜ್ಯದಲ್ಲಿ ಒಂದು ಸಾವು ವರದಿಯಾಗಿದೆ. ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಲು ಹೋದ ವ್ಯಕ್ತಿಯೊಬ್ಬ ಕುತ್ತಿಗೆ ಮೂಳೆ ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕೆರೆಯ ಕುಮಾರ್ ಎನ್ನುವ ಯುವಕ ತನ್ನ ಸ್ನೇಹಿತ ಜೊತೆ ಸೇರಿಕೊಂಡು ಸ್ಲೋ ಮೋಷನ್ನಲ್ಲಿ ದೂರದಿಂದ ಓಡಿ ಬಂದು ಉಲ್ಟಾ ನೆಗೆಯಲು ಯತ್ನಿಸಿದ್ದ. ಆದರೆ ಈ ಸಂದರ್ಭದಲ್ಲಿ ಆತನ ಕುತ್ತಿಗೆ ಕೆಳಮುಖವಾಗಿ ಬಿದ್ದು ಸ್ಪೈನಲ್ ಕಾರ್ಡ್ ಮುರಿದುಕೊಂಡಿತ್ತು.ಈ ನಡುವೆ ಕುಮಾರ್ ಮೆದುಳಿನ ನಡುವಿನ ಭಾಗದಲ್ಲಿ ಆತನಿಗೆ ಪೆಟ್ಟಾಗಿದ್ದು, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರಗೆ ಕಳೆದ ಒಂದು ವಾರದ ಹಿಂದೆ ಆತನನನ್ನು ಸೇರಿಸಲಾಗಿತ್ತು,
ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಸಾವನ್ನಪಿದ್ದಾನೆ. ಇದೇ ವೇಳೆ ಮೃತ ಕುಮಾರ್ನ ಮೃತದೇಹವನ್ನು ಹುಟ್ಟೂರು ಗೋಡೆಕೆರೆಗೆ ತರಲಾಗುವುದು ಎನ್ನಲಾಗಿದ್ದು, ಸದ್ಯ ಬೆಂಗಳೂರಿನಿಂದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕೆರೆಗೆ ಮೃತದೇಹ ಬರಬೇಕಾಗಿದೆ.