ಧಾರವಾಡ,ಜೂ23(DaijiworldNews/AZM): ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಚಲಿಸುವ ರೈಲಿನಲ್ಲೇ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ರೈಲ್ವೆ ಇತಿಹಾಸದಲ್ಲೇ ಇಂತಹವೊಂದು ಕೆಲಸ ಮಾಡಿರುವ ಮೊದಲ ಗೆ ಸಚಿವರು ಸುರೇಶ್ ಅಂಗಡಿಯಾಗಿದ್ದಾರೆ.
ಅವರು ಇಂದು ಬೆಳಗಾವಿ-ಹುಬ್ಬಳ್ಳಿ ಮಧ್ಯೆ ಚಲಿಸುವ ರೈಲಿನಲ್ಲಿ ಅಧಿಕಾರಿಗಳ ಜೊತೆ ಸುರೇಶ್ ಅಂಗಡಿ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ರೈಲಿನಲ್ಲಿ ಪ್ರಯಾಣಿಸುತ್ತಲೇ ಅಧಿಕಾರಿಗಳೊಂದಿಗೆ ಸಭೆ ಕೂಡಾ ನಡೆಸಿದ್ದಾರೆ. ಇದೇ ವೇಳೆ ಬೆಳಗಾವಿ-ಹುಬ್ಬಳ್ಳಿ ಮಧ್ಯದ ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ ರೈಲು ನಿಲ್ದಾಣಗಳ ಪರಿಶೀಲನೆ ಮಾಡಿದರು.